ಯುವಜನ

ಶಿರಸಿ: ಈಜಲು ತೆರಳಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರುಪಾಲು

Views: 26

ಕನ್ನಡ ಕರಾವಳಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಈಜಲು ತೆರಳಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು  ನೀರುಪಾಲಾದ ದುರಂತ ಘಟನೆ ಸಂಭವಿಸಿದೆ.

ಶಿರಸಿ ತಾಲೂಕಿನ ಉಂಚಳ್ಳಿ ಸಮೀಪದ ಮಾಸ್ತಿಜಡ್ಡಿ ಗ್ರಾಮದಲ್ಲಿನ ಹೊಳೆಯಲ್ಲಿ ಈ ಭೀಕರ ಘಟನೆ ನಡೆದಿದೆ. ಈಜಲು ತೆರಳಿದ್ದ ವೇಳೆ ಹೊಳೆಗೆ ನೀರಿನಲ್ಲಿ ಮುಳುಗಿ ಇಬ್ಬರೂ ಯುವಕರು ಸಾವನ್ನಪ್ಪಿದ್ದಾರೆ.

ಮೃತರನ್ನು ಮಾಸ್ತಿಜಡ್ಡಿ ಗ್ರಾಮದ ಮದನ್ ನಾಯ್ಕ (17) ಹಾಗೂ ಹೊನ್ನಾವರದ ಲೋಹಿತ್ ನಾಯ್ಕ (19) ಎಂದು ಗುರುತಿಸಲಾಗಿದೆ.

ಲೋಹಿತ್ ಉಡುಪಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಮದನ್ ನಾಯ್ಕ ಶಿರಸಿ ಮಾರಿಕಾಂಬಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ.

ಇಬ್ಬರೂ ಯುವಕರು ಸ್ನೇಹಿತರಾಗಿದ್ದು, ಶನಿವಾರ ಮಧ್ಯಾಹ್ನ ಈಜಲು ಎಂದು ಹೊಳೆಗೆ ತೆರಳಿದ್ದರು. ಆದರೆ, ಅವರು ಈಜಲು ಹೋದ ಸ್ಥಳ ಆಳವಾಗಿತ್ತು. ಅದರ ಅರಿವಿಲ್ಲದೆಯೇ ಅವರು ನೀರಿಗಿಳಿದಿದ್ದು, ನಿಯಂತ್ರಣ ತಪ್ಪಿ ಮುಳುಗಿ ಹೋಗಿದ್ದಾರೆ. ಸ್ಥಳೀಯರು ತಕ್ಷಣವೇ ರಕ್ಷಣೆಗೆ ಮುಂದಾದರೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.

ಘಟನೆಯ ತೀವ್ರತೆಯನ್ನು ಅರಿತ ಸ್ಥಳೀಯರು, ತಕ್ಷಣವೇ ಶ್ರೀ ಮಾರಿಕಾಂಬ ರೆಸ್ಕ್ಯೂ ಟೀಮ್ ಗೆ ಮಾಹಿತಿ ನೀಡಿದರು. ರೆಸ್ಕ್ಯೂ ತಂಡದ ಗೋಪಾಲ ಗೌಡ ಅವರ ನೇತೃತ್ವದಲ್ಲಿ ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಶವ ಶೋಧ ಕಾರ್ಯಾಚರಣೆ ನಡೆಸಿತು. ಕೆಲವು ಗಂಟೆಗಳ ಸತತ ಪ್ರಯತ್ನದ ಬಳಿಕ, ತಂಡವು ಮದನ್ ಮತ್ತು ಲೋಹಿತ್ ಅವರ ಶವಗಳನ್ನು 15 ಅಡಿ ಆಳದ ಬಾಂದಾರಿನ ನೀರಿನಿಂದ ಹೊರತೆಗೆಯುವಲ್ಲಿ ಯಶಸ್ವಿಯಾಯಿತು.

 

Related Articles

Back to top button
error: Content is protected !!