ಇತರೆ

ಪ್ಲಿಪ್‌ ಕಾರ್ಟ್‌ ಬಾಯ್ ಬಲವಂತವಾಗಿ ಬಾತ್‌ರೂಮ್ ಬಳಸಿ ಯುವತಿಗೆ ಅಸಭ್ಯ ವರ್ತನೆ :ಆರೋಪ

Views: 65

ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನಲ್ಲಿ ಪಾರ್ಸೆಲ್ ಡೆಲಿವರಿ ಹೆಸರಿನಲ್ಲಿ ಮನೆಗೆ ಬಂದಿದ್ದ ಪ್ಲಿಪ್‌ ಕಾರ್ಟ್‌-ಮಿಂತ್ರಾ ಡೆಲಿವರಿ ಬಾಯ್ ವಿರುದ್ಧ ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾರೆ. ಮಾರತ್‌ಹಳ್ಳಿ ಸಮೀಪದ ಮುನೇನಕೊಪ್ಪಲು ಅಪಾರ್ಟ್‌ಮೆಂಟ್‌ನಲ್ಲಿ ನಡೆದಿರುವ ಈ ಘಟನೆ ಆತಂಕಕ್ಕೆ ಕಾರಣವಾಗಿದ್ದು, ಯುವತಿಯ ದೂರಿನ ಮೇರೆಗೆ ಮಾರುತಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್  ದಾಖಲಿಸಿದ್ದಾರೆ.

ಪ್ಲಿಪ್‌ಕಾರ್ಟ್-ಮಿಂತ್ರಾ ಪಾರ್ಸೆಲ್ ವಿತರಿಸಲು ಮನೆಗೆ ಬಂದಿದ್ದ ಡೆಲಿವರಿ ಬಾಯ್, ಯುವತಿಯ ಬಳಿ ಬಾತ್ರೂಮ್ ಬಳಸಲು ಅನುಮತಿ ಕೇಳಿದ್ದಾನೆ.ಆದರೆ ಅಪರಿಚಿತ ವ್ಯಕ್ತಿಗೆ ಮನೆಯೊಳಗೆ ಬಾತ್‌ರೂಮ್ ಬಳಸಲು ಅವಕಾಶ ನೀಡುವುದಿಲ್ಲ ಎಂದು ಯುವತಿ ಸ್ಪಷ್ಟವಾಗಿ ನಿರಾಕರಿಸಿದ್ದಾಳೆ.

ಯುವತಿಯ ಆರೋಪದಂತೆ, ಅನುಮತಿ ನಿರಾಕರಿಸಿದರೂ ಡೆಲಿವರಿ ಬಾಯ್ ಬಲವಂತವಾಗಿ ಮನೆಯೊಳಗೆ ಪ್ರವೇಶಿಸಿ ಬಾತ್‌ರೂಮ್ ಬಳಸಿದ್ದಾನೆ. ಬಳಿಕ ಹೊರಬಂದ ವೇಳೆ ತನ್ನ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿ ಹೇಳಿದ್ದಾಳೆ.

ಡೆಲಿವರಿ ಬಾಯ್ ಮನೆಯ ಹೊರಗೆ ಬಂದ ಬಳಿಕ, ಯುವತಿ ಮೊಬೈಲ್‌ನಲ್ಲಿ ವಿಡಿಯೋ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಇದೀಗ ತನಿಖೆಗೆ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆ ಇದ್ದು. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

Related Articles

Back to top button
error: Content is protected !!