ಜನಮನ

ಗೃಹಜ್ಯೋತಿ ಯೋಜನೆಯ ಮರು ಪರಿಶೀಲನೆ: ನೀವು ನೀಡಬೇಕಾದ ದಾಖಲೆಗಳೇನು?

Views: 185

ಕನ್ನಡ ಕರಾವಳಿ ಸುದ್ದಿ: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಪುನರ್ ಪರಿಶೀಲನೆ ಪ್ರಾರಂಭಿಸಿದೆ. ಪ್ರತಿ ಮನೆಗೂ ಗೃಹ ಜ್ಯೋತಿ ಬಳಕೆದಾರರ ಪರಿಶೀಲನೆ ನಡೆಸುತ್ತಿದೆ. ಮೀಟರ್ ರೀಡರ್ ಹಾಗೂ ಲೈನ್ಮ್ಯಾನ್ಗಳು ಪ್ರತಿ‌ ಮನೆಗೂ ತೆರಳಿ, ಮನೆಯಲ್ಲಿ ವಾಸ ಮಾಡುತ್ತಿರುವವರ ಬಳಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ‌.

ಯಾವ ಮಾಹಿತಿ : ಮೀಟರ್ ರೀಡರ್ ಮತ್ತು ಲೈನ್ಮ್ಯಾನ್ಗಳು ಒಟ್ಟಿಗೆ ತೆರಳಿ ಮನೆಯಲ್ಲಿ ವಾಸ ಮಾಡುವವರ ಬಳಿ, ಇದು ಸ್ವಂತ ಮನೆಯೇ, ಬಾಡಿಗೆ ಮನೆಯೇ ಮನೆಯಲ್ಲಿ ಎಷ್ಟು ಜನ ವಾಸವಾಗಿದ್ಧೀರಿ, ನೀವು ಯಾವ ಜಾತಿ, ಜಾತಿ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ವಿದ್ಯುತ್ ಮೀಟರ್ ಬಿಲ್ ಹೀಗೆ ಹಲವು ದಾಖಲೆಗಳನ್ನು ಸರ್ಕಾರ ಹೇಳಿದಂತೆ ಪಡೆದು ಅದನ್ನು ಮೊದಲು ಮೊಬೈಲ್ ಆ್ಯಪ್ನಲ್ಲಿ ಅಪ್ಲೋಡ್ ಮಾಡಿಕೊಂಡು ನಂತರ ಆಫ್‌ಲೈನ್ ಅರ್ಜಿಯನ್ನು ತುಂಬುತ್ತಾರೆ. ಅದಕ್ಕೆ ಮನೆಯಲ್ಲಿ ವಾಸವಾಗಿರುವವರ ಬಳಿ ಸಹಿ ಪಡೆದು ತೆರಳುತ್ತಿದ್ದಾರೆ‌.

ಈ ಹಿಂದೆ ಆನ್‌ಲೈನ್ನಲ್ಲಿ ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಿದವರು ಈಗ ಮನೆಗೆ ಬರುವ ಮೆಸ್ಕಾಂ ಸಿಬ್ಬಂದಿಗೆ ತಮ್ಮ ಮಾಹಿತಿಯನ್ನು ನೀಡಬೇಕು. ಈ ವೇಳೆ ಆನ್ಲೈನ್ನಲ್ಲಿ ಅರ್ಜಿ ತುಂಬುವ ವೇಳೆ ಮನೆಯಲ್ಲಿ ಇರುವವರ ಫೋಟೋವನ್ನು ತೆಗೆದುಕೊಂಡು ಅಪ್ಲೋಡ್ ಮಾಡುತ್ತಾರೆ. ಜೊತೆಗೆ ಆಧಾರ್ನಲ್ಲಿರುವ ಮೊಬೈಲ್ ನಂಬರ್ಗೆ OTP ಬರುತ್ತದೆ. ಇದರಿಂದ ಎಲ್ಲ ಗೃಹ ಜ್ಯೋತಿ ಬಳಕೆದಾರರು ಕಡ್ಡಾಯವಾಗಿ ಆಧಾರ್ನಲ್ಲಿರುವ ಮೊಬೈಲ್ ನಂಬರ್ ಇಟ್ಟುಕೊಳ್ಳಬೇಕು.

ಒಂದು ವೇಳೆ ಆಧಾರ್ನಲ್ಲಿನ ನಂಬರ್ ಬದಲಾವಣೆ ಮಾಡಬೇಕಾದರೆ ತಕ್ಷಣದಿಂದಲೇ ನಂಬರ್ ಬದಲಾಯಿಸಿಕೊಳ್ಳಬೇಕು. ಆನ್ಲೈನ್, ಆಫ್ಲೈನ್ ಪ್ರಕ್ರಿಯೆ ಮುಗಿಸಲು ಕನಿಷ್ಠ 8 ನಿಮಿಷ ಬೇಕಾಗುತ್ತದೆ. ಇದೆಲ್ಲಾ ಮುಗಿದ ನಂತರ ಗ್ರಾಹಕರ ಮೊಬೈಲ್ಗೆ ಒಂದು ಮೇಸೆಜ್ ಬರುತ್ತದೆ. ನಂತರ ಆಫ್ಲೈನ್ನಲ್ಲಿ ತುಂಬಿದ ಅರ್ಜಿಯನ್ನು ಗ್ರಾಹಕರಿಗೆ ನೀಡಲಾಗುತ್ತದೆ‌. ಇದರಿಂದ ಗೃಹಜ್ಯೋತಿ ಯೋಜನೆಗೆ ಬಳಕೆದಾರರಾಗಬೇಕಾದರೆ, ಮೊದಲು ಆಧಾರ್ ಕಾರ್ಡ್ನಲ್ಲಿ‌ ಮೊಬೈಲ್ ನಂಬರ್ ಬಳಕೆಯಲ್ಲಿರಬೇಕು. ವೋಟರ್ ಐಡಿ ಸರಿಯಾಗಿರಬೇಕು. ಅವಶ್ಯಕವಿದ್ದರೆ ಜಾತಿ ಪ್ರಮಾಣ ಪತ್ರ, ಬಾಡಿಗೆ ಮನೆಯಲ್ಲಿದ್ರೆ, ಮನೆಯ ಕರಾರುಪತ್ರ ಜೊತೆಯಲ್ಲಿಟ್ಟು ಕೊಳ್ಳಬೇಕು.‌ ಇದರಲ್ಲಿ ತೆರಿಗೆದಾರರಾಗಿದ್ದರೆ, ಅವರು ತಮ್ಮ ಪಾನ್ಕಾರ್ಡ್ ಸಹ ನೀಡಬೇಕು. ಸದ್ಯ ಮೀಟರ್ ರೀಡರ್ ಹಾಗೂ ಲೈನ್ಮ್ಯಾನ್ಗಳಿಗೆ ದಿನಕ್ಕೆ ಇಷ್ಟೇ ಮನೆ ಮಾಡಬೇಕೆಂದು ಟಾರ್ಗೆಟ್ ನೀಡಿಲ್ಲ. ಆದರೆ ಎರಡು ತಿಂಗಳಲ್ಲಿ ತಮ್ಮ ಏರಿಯಾವನ್ನು ಮುಗಿಸಬೇಕೆಂದು ತಿಳಿಸಿದೆ. ಸರ್ಕಾರ ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯ ಪಡೆಯುವವರನ್ನು ಈ ಯೋಜನೆಯಿಂದ ಹೊರಗಿಡಬಹುದು.

ಗೃಹಜ್ಯೋತಿ ಯೋಜನೆಯ ಮರು ಪರಿಶೀಲನೆ ನೀಡಬೇಕಾದ ದಾಖಲೆಗಳು:

ರೇಷನ್ ಕಾರ್ಡ್, ಆಧಾರ್ ಕಾರ್ಡ್ , ವೋಟರ್ ಐಡಿ, ವಿದ್ಯುತ್ ಬಿಲ್, ಪಾಸ್ಪೋರ್ಟ್ ಸೈಜ್ ಫೋಟೋ. ಜಾತಿ ಪ್ರಮಾಣ ಪತ್ರ, ಬಾಡಿಗೆ ಇದ್ದವರು ಬಾಡಿಗೆ ಕರಾರರು ಪತ್ರವನ್ನು ನೀಡಬೇಕಾಗುತ್ತದೆ.‌ ಇದನ್ನು ಸರ್ಕಾರ ಬಿಡುಗಡೆ ಮಾಡಿರುವ ಗೃಹ ಜ್ಯೋತಿ ಎಂಬ ಮೊಬೈಲ್ ಆ್ಯಪ್ನಲ್ಲಿ ಎಲ್ಲವನ್ನು ಮೊದಲು ಭರ್ತಿ ಮಾಡಬೇಕು. ಆನ್ಲೈನ್ನಲ್ಲಿ ಅರ್ಜಿಯನ್ನು ಭರ್ತಿ ಮಾಡಿದ ನಂತರ ಗ್ರಾಹಕರಿಗೆ ನೀಡಲು ಅರ್ಜಿಯನ್ನು ಭರ್ತಿ ಮಾಡಿ, ಒಂದು ಅರ್ಜಿಯನ್ನು ನಾವಿಟ್ಟುಕೊಂಡು,‌ ಇನ್ನೂಂದನ್ನು ಗ್ರಾಹಕರಿಗೆ ನೀಡಲಾಗುತ್ತದೆ.‌ ಎಲ್ಲಾ‌ ದಾಖಲೆಗಳು ಸರಿಯಾಗಿದ್ದು ಒಂದು ಅರ್ಜಿ ಭರ್ತಿ ಮಾಡಬೇಕೆಂದರೆ ಕನಿಷ್ಠ ಅಂದ್ರು‌ 15 ನಿಮಿಷ ಬೇಕಾಗುತ್ತದೆ.‌ ಸರಿಯಾಗಿ ನೆಟ್ವರ್ಕ್ ಇಲ್ಲದೇ ಹೋದ್ರೆ, ದಾಖಲೆಗಳನ್ನು ಹುಡುಕಬೇಕೆಂದಾಗ 40 ನಿಮಿಷ ಬೇಕಾಗುತ್ತದೆ. ಸದ್ಯಕ್ಕೆ ಪ್ರತಿ‌ ದಿನದ ಟಾರ್ಗೆಟ್ ಇಲ್ಲ, ಆದರೆ, ಎರಡು ತಿಂಗಳಲ್ಲಿ ಮುಗಿಸಬೇಕೆಂದು ತಿಳಿಸಿದ್ದಾರೆ ಎಂದರು.

Related Articles

Back to top button
error: Content is protected !!