ಸಾಂಸ್ಕೃತಿಕ
ಡಾನ್ ಬಾಸ್ಕೊ ವಿದ್ಯಾರ್ಥಿಗಳಿಗೆ ಅಬ್ಯಾಕಸ್ ವರ್ಲ್ಡ್ ಸಿಟಿ ಕಪ್

Views: 0
ಕುಂದಾಪುರ: ಈಚೆಗೆ ತಮಿಳುನಾಡಿನ ಮಹಾಬಲಿಪುರಂ ನಲ್ಲಿ ನಡೆದ ಅಬ್ಯಾಕಸ್ ಮಾನಸಿಕ ಗಣಿತ ಮತ್ತು ಗಣಿತದ ಜಾಗತಿಕ ಸ್ಪರ್ಧೆಯಲ್ಲಿ ತ್ರಾಸಿಯ ಡಾನ್ ಬಾಸ್ಕೊ ಸೀನಿಯರ್ ಸೆಕೆಂಡರಿ ಶಾಲೆಯ ಮೂರನೆ ತರಗತಿಯ ವಿದ್ಯಾರ್ಥಿನಿ ಪಾರ್ವದಿ ಪಿ. ಎಂ ಮತ್ತು ಆರನೆ ತರಗತಿ ವಿದ್ಯಾರ್ಥಿನಿ ಚೈತನ್ಯಾ ರಜತ ಫಲಕ ಗೆದ್ದು ಜಾಗತಿಕ ಚಾಂಪಿಯನ್ ಸ್ಥಾನ ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ ಭಾರತ ಮತ್ತು ವಿದೇಶಗಳ ಹಲವು ಸ್ಪರ್ಧಿಗಳು ಭಾಗವಹಿಸಿದ್ದರು. ಡಾನ್ ಬಾಸ್ಕೊ ಸ್ಪರ್ಧಿಗಳಿಗೆ ಅಬ್ಯಾಕಸ್ ತರಬೇತಿಗಾರ ಎಂ. ಪ್ರಸನ್ನ ತರಬೇತಿ ನೀಡಿದ್ದರು. ಸಹಪಠ್ಯ ಚಟುವಟಿಕೆಗಳಿಗೆ ವಿಶೇಷ ಅವಕಾಶ ಕಲ್ಪಿಸುವ ಈ ಶಾಲೆಯಲ್ಲಿ ಸಂಗೀತ, ನೃತ್ಯ, ಕಲೆ, ಕುಶಲಕಲೆ, ಕರಾಟೆ, ಚೆಸ್, ಯೋಗ, ಸ್ಕೇಟಿಂಗ್ ಕಲಿಕೆಗೆ ಅವಕಾಶ ಇದ್ದು, ವಿದ್ಯಾರ್ಥಿಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡುತ್ತಿದ್ದಾರೆ ಎಂದು ಪ್ರಾಂಶುಪಾಲ ಫಾದರ್ ಮ್ಯಾಕ್ಸಿಮ್ ಡಿಸೋಜ ತಿಳಿಸಿದ್ದಾರೆ.






