ಜೇಸಿಐ ಮಣಿಪಾಲ ಹಿಲ್ ಸಿಟಿ ಯ ವತಿಯಿಂದ “ಯುವ ಸಬಲೀಕರಣ” ತರಬೇತಿ ಕಾರ್ಯಕ್ರಮ

Views: 0
ಉಡುಪಿ: ಜೇಸಿಐ ಮಣಿಪಾಲ ಹಿಲ್ ಸಿಟಿ ಯ ವತಿಯಿಂದ “ಯುವ ಸಬಲೀಕರಣ” ಕಾರ್ಯಕ್ರಮದ ಮುಖೇನ ಮಣಿಪಾಲದ ರಾಜೀವ ನಗರ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ ತರಬೇತಿ ಕಾರ್ಯಕ್ರಮ ನಡೆಯಿತು. ದಿನಾಂಕ 01-08-2023 ಮತ್ತು 02-08-2023 ರಂದು ನಡೆದ ಈ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶ್ರೀ ಬಾಲಕೃಷ್ಣ ಪಿ. ಅವರು, ಸಂಪನ್ಮೂಲ ವ್ಯಕ್ತಿಯಾಗಿ, ಡಾ. ಶಿವಪ್ರಸಾದ್ ಕಾರ್ಕಳ, ರಾಷ್ಟ್ರೀಯ ತರಬೇತುದಾರರು, ಜೇಸಿಐ ಭಾರತ, ಹಾಗು ಅಧ್ಯಕ್ಷತೆಯನ್ನು ಜೇಸಿಐ ಮಣಿಪಾಲ ಹಿಲ್ ಸಿಟಿಯ ಅಧ್ಯಕ್ಷ ಜೆಸಿ ಜಯಂತ ತಲವಾರ್ ಇವರು ವಹಿಸಿದ್ದರು. ಶಾಲಾ ವಿದ್ಯಾರ್ಥಿ ನಾಯಕರಾದ ಕು.ಕೃಷ್ಣ ಹಾಗೂ ಕುಮಾರಿ ರಕ್ಷಿತಾ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಯ ನಿರ್ವಹಣೆ, ಗುರಿ ನಿರ್ಧಾರ, ಸೃಜನಶೀಲತೆ, ಸಾಮಾಜಿಕ ಮಾಧ್ಯಮದ ಬಳಕೆ, ಸಂವಹನ ಮೊದಲಾದ ಐದು ವಿಷಯಗಳಲ್ಲಿ ಐದು ಗಂಟೆಗಳ ತರಬೇತಿಯನ್ನು ನೀಡಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳ ಮೂಲಕ ವಿಷಯವನ್ನು ಮನದಟ್ಟು ಮಾಡಲಾಯಿತು.
ಶಾಲಾ ಜೀವನದಲ್ಲಿ ಸಮಯವನ್ನು ಬಳಸುವ ಬಗೆ, ಜೀವನದ ಗುರಿ ನಿರ್ಧರಣೆ, ಸಾಮಾಜಿಕ ಮಾಧ್ಯಮದ ಅತಿಯಾದ ಬಳಕೆಯಿಂದ ಆಗುವ ತೊಂದರೆ ಮತ್ತು ಅನಾಹುತಗಳು, ಹೊಸ-ಹೊಸ ವಿಷಯಗಳನ್ನು ಗಮನಿಸುವುದು, ಸೃಷ್ಟಿಸುವುದು ಮತ್ತು ಪ್ರತಿ ವಿಷಯದಲ್ಲಿ ಹೊಸತನವನ್ನು ಹೇಗೆ ಕಾಣಬಹುದು ಎಂದು ವಿವರಿಸಲಾಯಿತು.
ಶಾಲಾ ಶಿಕ್ಷಕರಾದ ಶ್ರೀ ರವೀಂದ್ರ ಕುಮಾರ್ ನಿರ್ವಹಿಸಿದ ಸಭಾ ಕಾರ್ಯಕ್ರಮದಲ್ಲಿ, ಯೋಜನಾ ನಿರ್ದೇಶಕ ಜೇಸಿ ಸಂದೀಪ್ ನಾಯಕ್ ಅವರು ಧನ್ಯವಾದ ಸಮರ್ಪಿಸಿದರು. ತರಬೇತಿಯ ಕೊನೆಯಲ್ಲಿ ವಿದ್ಯಾರ್ಥಿಗಳು ತರಬೇತಿಯ ಬಗ್ಗೆ ಅವರ ಅನುಭವದ ನುಡಿಯನ್ನು ತಿಳಿಸಿದರು.






