ಸಾಂಸ್ಕೃತಿಕ

ಉಡುಪಿ ಶ್ರೀಕೃಷ್ಣ ಮಠದಲ್ಲಿ ನೆಲದ ಮೇಲೆ ಊಟ ಮಾಡಿ ಹರಕೆ ತೀರಿಸಿದ ನಟ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ

Views: 9

ಕನ್ನಡ ಕರಾವಳಿ ಸುದ್ದಿ: ಸ್ಯಾಂಡಲ್‌ವುಡ್‌ನ ಜನಪ್ರಿಯ ಜೋಡಿ, ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯ ದಂಪತಿ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ವಿಶೇಷ ಹರಕೆ ಸಲ್ಲಿಸಿದ್ದಾರೆ. ತಮ್ಮ ಪುಟ್ಟ ಮಗನೊಂದಿಗೆ ಕೃಷ್ಣನ ದರ್ಶನ ಪಡೆದ ಈ ತಾರಾ ದಂಪತಿ, ಮಠದಲ್ಲಿ ಸಾಮಾನ್ಯ ಭಕ್ತರಂತೆ ಕುಳಿತು ಪ್ರಸಾದ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸ್ಯಾಂಡಲ್‌ವುಡ್‌ನ ಸೆಲಬ್ರೆಟಿ ದಂಪತಿಯಾಗಿರುವ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹಾರಿಗೆ ಕಳೆದ ವರ್ಷ ಜನವರಿ 26ರಂದು ಮುದ್ದಾದ ಗಂಡು ಮಗು ಜನಿಸಿತ್ತು. ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ಈ ಜೋಡಿಗೆ ಈ ವಿಶಯ ಮತ್ತಷ್ಟು ಖುಷಿ ನೀಡಿತ್ತು. ಇದೀಗ ಮಗು ಜನಿಸಿದ 1 ವರ್ಷದ ನಂತರ ದಂಪತಿಗಳಿಬ್ಬರು ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ.

ಮಗು ಹುಟ್ಟಿದರೆ ನೆಲಭೋಜನ ಮಾಡುವುದಾಗಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಈ ದಂಪತಿಗೆ ಗಂಡು ಮಗು ಜನಿಸಿತು. ಈಗ ಮಗನೊಂದಿಗೆ ಬಂದು ಶ್ರೀಕೃಷ್ಣನ ದರ್ಶನ ಪಡೆದ ಅವರು ಮುಖ್ಯಪ್ರಾಣನ ಸನ್ನಿಧಿಯಲ್ಲಿ ನೆಲಭೋಜ‌ನ ಪ್ರಸಾದ ಸ್ವೀಕರಿಸಿದ್ದಾರೆ.

ಮಗನೊಂದಿಗೆ ದೇವರ ದರ್ಶನ ಮಾಡಿದ ಬಳಿಕ ಪರ್ಯಾಯ ಶೀರೂರು ಶ್ರೀ ವೇದವರ್ಧನ ಯತಿಗಳ ಆಶೀರ್ವಾದವನ್ನು ಕೂಡ ಅವರು ಪಡೆದರು. ‘ಬಹಳ ಗ್ಯಾಪ್ ಬಳಿಕ ನಾವು ಉಡುಪಿ ಮಠಕ್ಕೆ ಬಂದು ಶ್ರೀಕೃಷ್ಣನ ದರ್ಶನ ಮಾಡಿದೆವು. ಒಂದೂವರೆ ವರ್ಷದ ಹಿಂದೆ ಬಂದು ನಾವು ನೆಲಭೋಜನದ ಹರಿಕೆ ಮಾಡಿಕೊಂಡಿದ್ದೆವು. ದೇವರ ಅನುಗ್ರಹ ನಮಗೆ ಧಕ್ಕಿದೆ ಎಂಬುದು ನಮ್ಮ ನಂಬಿಕೆ. ಎಲ್ಲ ಪದ್ಧತಿಯು ಗಟ್ಟಿ ಹಿನ್ನೆಲೆಯಲ್ಲಿ ಹುಟ್ಟಿರುತ್ತದೆ. ಅದನ್ನು ನಾವು ಪಾಲಿಸಿದ್ದೇವೆ’ ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.

Related Articles

Back to top button
error: Content is protected !!