ಜನಮನ

ಕುಂದಾಪುರ: ಗುಡ್ಡೆಯಂಗಡಿಯಲ್ಲಿ SKF ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಉದ್ಘಾಟನೆ

Views: 41

ಕನ್ನಡ ಕರಾವಳಿ ಸುದ್ದಿ:ಕುಂದಾಪುರ ತಾಲೂಕಿನ ಗುಡ್ಡೆಯಂಗಡಿಯಲ್ಲಿ ಎಸ್‌ಕೆಎಫ್ ಇಂಡಸ್ಟ್ರಿಯಲ್‌ ಟ್ರೈನಿಂಗ್  ಸೆಂಟರ್‌ನ್ನು ಮೇ 25 ರಂದು ಸೋಮವಾರ ಮೂಡಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಉದ್ಘಾಟಿಸಿ, ಮಾತನಾಡಿದ ಅವರು ಬದುಕಿನೊಂದಿಗೆ ನಂಬಿಕೆ ಇದ್ದರೆ ಸುಖವಿದೆ.ಕಾಲಕಾಲಕ್ಕೆ ಬದಲಾವಣೆ ಮಾಡುತ್ತಾ ತನಗೆ ಬಂದ ಆದಾಯದಲ್ಲಿ ಬಹುಪಾಲು ಸಮಾಜಕ್ಕೆ ಅರ್ಪಿಸುತ್ತಾ, ಹುಟ್ಟೂರಿನ ಋಣ ಮತ್ತು ಕಲಿತ ಶಾಲೆಯನ್ನು ಗುರುತಿಸಿಕೊಂಡು ಪ್ರಾಯೋಗಿಕ ಕೌಶಲ್ಯದೊಂದಿಗೆ ಯುವಜನತೆಯ ಬಾಳಿಗೆ ಹೊಸ ಭರವಸೆ ನೀಡಲು ಮುಂದಾಗಿರುವ ಡಾ| ಜಿ.ರಾಮಕೃಷ್ಣ ಆಚಾರ್  ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿ, 21 ರಾಷ್ಟ್ರಗಳಲ್ಲಿ ವಹಿವಾಟು ನಡೆಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದರು.

ಸಂಸ್ಥೆಯ ಚೇರ್ಮನ್ ಡಾ| ಜಿ. ರಾಮಕೃಷ್ಣ ಆಚಾರ್ ಆಶಯ ನುಡಿಗಳನ್ನಾಡುತ್ತಾ, ಮೇಕ್ ಇನ್ ಇಂಡಿಯಾ ರೀತಿಯಲ್ಲಿ ಗ್ರಾಮೀಣ ಭಾಗದ ಯುವ ಸಮುದಾಯಕ್ಕೆ ಕೌಶಲ ಆಧಾರಿತ ತರಬೇತಿ ನೀಡುವ ಉದ್ದೇಶದೊಂದಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಬೇಡಿಕೆಯಿರುವ ವಿವಿಧ ತಾಂತ್ರಿಕ ವಿಷಯಗಳ ಬಗ್ಗೆ ಇಲ್ಲಿ ತರಬೇತಿ ನೀಡಲಾಗುತ್ತದೆ.

ಯುವಜನತೆಯ ಬಾಳಿಗೆ ಹೊಸ ಭರವಸೆ ನೀಡುವ ಉದ್ದೇಶದಿಂದ 1 ವರ್ಷದ ಅವಧಿಯ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ವೆಲ್ಡಿಂಗ್ ಮತ್ತು ಫಿಟ್ಟಿಂಗ್, ಮೆಕ್ಯಾನಿಕ್ – ರೆಫ್ರಿಜರೇಶನ್, AC ಮತ್ತು ಪ್ಲಂಬಿಂಗ್, ಮಹಿಳೆಯರಿಗಾಗಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಈ ತರಬೇತಿ ಕೇಂದ್ರವು ಕೇವಲ ಪಠ್ಯದ ಜ್ಞಾನಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಸೌಲಭ್ಯಗಳನ್ನು ಹೊಂದಿದೆ ಎಂದರು.

ಇದೇ ಸಂದರ್ಭದಲ್ಲಿ ಡಾ| ಜಿ. ರಾಮಕೃಷ್ಣ ಆಚಾರ್ ಚಾರಿಟೆಬಲ್ ಟ್ರಸ್ಟ್‌ನ ಗೌರವ ಟ್ರಸ್ಟಿ ಪ್ರೊ| ಎಂ. ಬಾಲಕೃಷ್ಣ ಶೆಟ್ಟಿ, ಎಸ್‌ಕೆಎಫ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್‌ನ ತಾಂತ್ರಿಕ ಸಲಹೆಗಾರ ಎ. ಬಾಲಕೃಷ್ಣ ಹಾಗೂ ಫ್ಯಾಶನ್ ಡಿಸೈನ್ ವಿಭಾಗದ ಶ್ರೀ ವಿದ್ಯಾ, ತಾರನಾಥ್ ಜೆ ಆಚಾರ್, ಮಹೇಶ್ ಅವರನ್ನು ಗೌರವಿಸಲಾಯಿತು.

ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಆಡಳಿತ ಕಚೇರಿ ಉದ್ಘಾಟಿಸಿದರು. ಎಮ್. ದಿನೇಶ್ ಹೆಗ್ಡೆ ಉದ್ಯಮಿಗಳು ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ವಿಭಾಗ ಉದ್ಘಾಟಿಸಿದರು. ಡಾ. ಸುಧಾಕರ್ ಶೆಟ್ಟಿ ಚೇರ್ಮನ್, ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಕಂಪ್ಯೂಟರ್ ವಿಭಾಗ ಉದ್ಘಾಟಿಸಿದರು. ಎಸ್.ಎಸ್. ನಾಯಕ್  ಲೆಕ್ಕ ಪರಿಶೋಧಕರು ಮಂಗಳೂರು ಇವರು ಫ್ಯಾಶನ್ ಡಿಸೈನಿಂಗ್ ವಿಭಾಗ ಉದ್ಘಾಟಿಸಿದರು. ಬಿ. ಅರುಣ್ ಕುಮಾರ್ ಹೆಗ್ಡೆ ಪ್ರಥಮ ದರ್ಜೆ ಗುತ್ತಿಗೆದಾರರು ಯಡಾಡಿ-ಮತ್ಯಾಡಿ ಎಸಿ ಮತ್ತು ಪ್ಲಂಬಿಂಗ್ ವಿಭಾಗ ಉದ್ಘಾಟಿಸಿದರು. ಚಂದ್ರಶೇಖರ್ ಶೆಟ್ಟಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್, ಮೊಳಹಳ್ಳಿ ತರಗತಿ ಕೊಠಡಿ ಉದ್ಘಾಟಿಸಿದರು. ಡಾ. ರಮೇಶ್ ಶೆಟ್ಟಿ ಚೇರ್ಮನ್, ಸುಜ್ಞಾನ ಎಜುಕೇಶನ್ ಟ್ರಸ್ಟ್, ಕುಂದಾಪುರ ಫಿಟ್ಟಿಂಗ್ ಮತ್ತು ವೆಲ್ಡಿಂಗ್ ವಿಭಾಗ ಉದ್ಘಾಟಿಸಿದರು. 

ಆರಂಭದಲ್ಲಿ ಸಂಸ್ಥೆಯ ವಿವಿಧ ವಿಭಾಗಗಳನ್ನು ಉದ್ಘಾಟಿಸಲಾಯಿತು. ಗೌರವ ಟ್ರಸ್ಟಿ ಪ್ರೊ| ಎಂ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ವಿದ್ಯಾ ಫ್ಯಾಶನ್ ಡಿಸೈನ್ ಬಗ್ಗೆ ಮಾಹಿತಿ ನೀಡಿದರು. ಸುಜ್ಞಾನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ತೇಜಸ್ ಆರ್. ಆಚಾರ್, ರಕ್ಷತ್ ಆರ್.ಆಚಾರ್ ಸಹಕರಿಸಿದರು. ದಾಮೋದರ ಶರ್ಮ ಬಾರಕೂರು ಕಾರ್ಯಕ್ರಮ ನಿರೂಪಿಸಿದರು. ಉದ್ಯಮಿ ಪ್ರಜ್ವಲ್ ಆರ್. ಆಚಾರ್ ವಂದಿಸಿದರು.

 

 

Related Articles

Back to top button
error: Content is protected !!