ಇತರೆ

ಆಸ್ಪತ್ರೆಯಲ್ಲಿ ಔಷಧಿ ಹಾಕಿದ ಕೆಲವೇ ಕ್ಷಣದಲ್ಲಿ11 ತಿಂಗಳ ಮಗು ದಿಢೀ‌ರ್ ಸಾವು: ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ

Views: 17

ಕನ್ನಡ ಕರಾವಳಿ ಸುದ್ದಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ 11 ತಿಂಗಳ ಹೆಣ್ಣು ಮಗು ಚಿಕಿತ್ಸೆ ವೇಳೆ ಮೃತಪಟ್ಟಿದೆ. ಇನ್ನು ಮಗುವಿನ ಪೋಷಕರು, ಮಗುವಿಗೆ ಅವಧಿ ಮುಗಿದ ಔಷಧಿ ನೀಡಿದ್ದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.

11 ತಿಂಗಳ ಪೂರ್ವಿಕಾ ಮೃತಪಟ್ಟ ಪುಟ್ಟ ಕಂದಮ್ಮ

ವೈದ್ಯರು ಚಿಕಿತ್ಸೆ ನೀಡುತ್ತಿದ್ದ ವೇಳೆ ಮಗುವಿಗೆ ಔಷಧಿ ಹಾಕಿದ ಕೆಲವೇ ಕ್ಷಣದಲ್ಲಿ ಮಗು ಮೃತಪಟ್ಟಿದೆ ಎಂದು ಮಗುವಿನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವಧಿ ಮೀರಿದ ಔಷಧಿಯೇ ಕಾರಣವೆಂದು ಪೋಷಕರು ದೂರಿದ್ದಾರೆ. ಮಗುವನ್ನು ಕಳೆದುಕೊಂಡ ಪೋಷಕರು ಹಾಗೂ ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪರಿಶೀಲನೆ ಹಾಗೂ ಮುಂದಿನ ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

Related Articles

Back to top button
error: Content is protected !!