ಸಾಮಾಜಿಕ

ದಿಬ್ಬಣ ಹೊರಡಲು ಸಿದ್ದವಾಗುತ್ತಿದ್ದಂತೆ ಮಾಜಿ ಪ್ರಿಯತಮೆ ಎಂಟ್ರಿ…ರಣರಂಗವಾಯಿತು ಮದುವೆ ಮನೆ! 

Views: 118

ಕನ್ನಡ ಕರಾವಳಿ ಸುದ್ದಿ: ದಿಬ್ಬಣ ಹೊರಡಲು ಸಿದ್ದವಾಗಿತ್ತು. ವರ ಕುದುರೆಯನ್ನೇರಲು ಸಜ್ಜಾಗಿದ್ದ. ಅಷ್ಟರಲ್ಲೇ ಅಲ್ಲಿಗೆ ಬಂದ ಯುವತಿಯೊಬ್ಬಳು ಮಾಡಿದ ಹೈವೋಲ್ವೇಜ್ ಡ್ರಾಮಾದಿಂದಾಗಿ ಇಡೀ ಮದುವೆ ಮನೆಯೇ ರಣರಂಗವಾಗಿ ಮಾರ್ಪಟ್ಟ ಘಟನೆ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯಲ್ಲಿ ನಡೆದಿದೆ.

ಸಿನಿಮಾ ಶೈಲಿಯ ಎಂಟ್ರಿ!

ವರನು ಮದುವೆ ದಿರಿಸು ಧರಿಸಿ ಮೆರವಣಿಗೆ ಹೊರಡುತ್ತಿದ್ದಾಗ, ಇದ್ದಕ್ಕಿದ್ದಂತೆ ಅಲ್ಲಿಗೆ ಬಂದ ಯುವತಿಯೊಬ್ಬಳು ಮೆರವಣಿಗೆಯನ್ನು ತಡೆದಿದ್ದಾಳೆ. ಈತ ನನ್ನ ಪ್ರಿಯಕರ, ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಈಗ ಮತ್ತೊಬ್ಬಳ ಜೊತೆ ಮದುವೆಯಾಗುತ್ತಿದ್ದಾನೆ ಎಂದು ಕಿರುಚಾಡಿ ಗದ್ದಲ ಆರಂಭಿಸಿದಳು. ಇದನ್ನು ಕಂಡು ಅಲ್ಲಿದ್ದ ಅತಿಥಿಗಳು ಮತ್ತು ವರನ ಕಡೆಯವರು ದಂಗಾಗಿದ್ದಾರೆ.

ಪ್ರಿಯತಮೆಯ ಆಕ್ರೋಶ ಕೇವಲ ಮಾತಿಗೆ ಸೀಮಿತವಾಗಲಿಲ್ಲ. ಎಲ್ಲರ ಎದುರೇ ವರನ ಕಾಲರ್ ಹಿಡಿದು ಪ್ರಶ್ನಿಸಿದ ಆಕೆ, ಆತನಿಗೆ ಮನಬಂದಂತೆ ಹೊಡೆದಿದ್ದಾಳೆ. ತಾನು ವರನೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದ್ದಾಗಿ ಮತ್ತು ಆತ ತನಗೆ ವಂಚಿಸುತ್ತಿದ್ದಾನೆ ಎಂದು ಆಕೆ ಗಂಭೀರವಾಗಿ ಆರೋಪಿಸಿದ್ದಾಳೆ.

ಈ ವಿಷಯ ತಿಳಿಯುತ್ತಿದ್ದಂತೆಯೇ ವಧುವಿನ ಕಡೆಯವರು ಸ್ಥಳಕ್ಕೆ ಆಗಮಿಸಿ ಮದುವೆಯನ್ನು ತಕ್ಷಣವೇ ರದ್ದುಗೊಳಿಸಿದ್ದಾರೆ. ವಂಚಕ ವರ ನಮಗೆ ಬೇಡ ಎಂದು ವಧುವಿನ ಕುಟುಂಬಸ್ಥರು ಪಟ್ಟು ಹಿಡಿದರು. ಅಂತಿಮವಾಗಿ ವಧುವಿನ ಕಡೆಯವರು ವರನ ಕುಟುಂಬಕ್ಕೆ ನೀಡಿದ್ದ ಉಡುಗೊರೆ ಮತ್ತು ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿದರು

ಪೊಲೀಸ್ ಠಾಣೆಯಲ್ಲಿ ಪ್ರಕರಣ ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಗಲಾಟೆ ಶಾಂತಗೊಳಿಸಿದರು. ವರ ಮತ್ತು ಆತನ ಪ್ರಿಯತಮೆಯನ್ನು ವಿಚಾರಣೆಗಾಗಿ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಂಭ್ರಮದಿಂದ ನಡೆಯಬೇಕಿದ್ದ ಮದುವೆ ಈಗ ಪೊಲೀಸ್ ಮೆಟ್ಟಿಲೇರಿದ್ದು, ಫತೇಪುರದಲ್ಲಿ ಈ ಸುದ್ದಿ ಭಾರಿ ಚರ್ಚೆಗೆ ಕಾರಣವಾಗಿದೆ.

 

Related Articles

Back to top button
error: Content is protected !!