ಎಟಿಎಂನಲ್ಲಿ ಹಣ ಪಡೆಯುವಾಗ ಶುರುವಾದ ಪ್ರೀತಿ.. ಜಾತಿ ಸಂಕೋಲೆ ಮೀರಿ ಮದುವೆ
Views: 79
ಕನ್ನಡ ಕರಾವಳಿ ಸುದ್ದಿ: ಚಿಕ್ಕಮಗಳೂರು ಜಿಲ್ಲೆ ಅಪರೂಪದ ವಿವಾಹಕ್ಕೆ ಸಾಕ್ಷಿಯಾಗಿದ್ದು, ಜಾತಿಯ ಎಲ್ಲೆಯನ್ನು ಮೀರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬ್ರಾಹ್ಮಣ ಸಮುದಾಯದ ಯುವಕ ಪರಿಶಿಷ್ಟ ಸಮುದಾಯದ ಯುವತಿಯ ಕೈ ಹಿಡಿದಿದ್ದಾರೆ.
ಬೌದ್ಧ ಸಂಘಟನೆ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವಿವಾಹ ಮಹೋತ್ಸವ ನೆರವೇರಿದೆ.
ಯುವತಿ ಸಾವಿತ್ರಿ ಎಂಟಿಎಂನಿಂದ ಹಣ ತೆಗೆಯುವುದಕ್ಕೆ ಹೋದಾಗ ಅವರಿಗೆ ಸಚಿನ್ ಯುವಕನ ಪರಿಚಯವಾಗಿತ್ತು. ಎಟಿಎಂನಲ್ಲಿ ಹಣ ತೆಗೆಯುವುದಕ್ಕೆ ಸಾವಿತ್ರಿ ಕಷ್ಟಪಡುತ್ತಿರುವುದನ್ನು ನೋಡಿದ ಸಚಿನ್ ಎಟಿಎಂನಿಂದ ಹಣ ತೆಗೆದುಕೊಡುವುದಕ್ಕೆ ನೆರವಾಗಿದ್ದರು. ಈ ಕ್ಷಣದಲ್ಲಿ ಇಬ್ಬರಿಗೆ ಪ್ರೀತಿಯಾಗಿದೆ. ಇದೇ ಸಮಯದಲ್ಲಿ ಇಬ್ಬರ ನಡುವೆ ದೂರವಾಣಿ ಸಂಖ್ಯೆ ವಿನಿಮಯ ಆಗಿದೆ.
ಮೊಬೈಲ್‌ನಲ್ಲಿ ಮಾತನಾಡಿದ ಇಬ್ಬರು ಇನ್ನಷ್ಟು ಹತ್ತಿರವಾಗಿದ್ದು ಪರಿಚಯ ಪ್ರೀತಿಯಾಗಿ ಬೆಳೆದಿದೆ. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಎರಡೂ ಮನೆಯವರನ್ನು ಈ ಜೋಡಿ ಒಪ್ಪಿಸಿ ಸಾಮೂಹಿಕ ಮದುವೆಯಲ್ಲಿ ವಿವಾಹವಾಗಿದ್ದು ವಿಶೇಷವಾಗಿದೆ. ಎಟಿಎಂನಲ್ಲಿ ಪರಿಚಯ ನಂತರ ಪ್ರೀತಿ ಈಗ ಜಾತಿ ಸಂಕೋಲೆಯನ್ನು ಮೀರಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.






