ಯುವಜನ

ರೈಲು ಪ್ರಯಾಣದ ವೇಳೆ ಲೈಂಗಿಕ ಕಿರುಕುಳ: ಯುವಕನ ತುಟಿಗೆ ಲಿಪ್‌ಸ್ಟಿಕ್ ಹಚ್ಚಿ, ಬಳೆ ತೊಡಿಸಿ ವಿಡಿಯೋ ವೈರಲ್ ಮಾಡಿದ ಯುವತಿ!

Views: 115

ಕನ್ನಡ ಕರಾವಳಿ ಸುದ್ದಿ: ರೈಲಿನಲ್ಲಿ ಸಹ ಪ್ರಯಾಣಿಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆದರೆ ಇದಕ್ಕೆ ಭಯಪಡದೆ, ಯಾವುದೇ ಅಂಜಿಕೆ ತೋರದೆ ಆಕೆ ಕಾಮುಕನಿಗೆ ತಕ್ಕ ಪಾಠ ಕಲಿಸಿದ್ದಾಳೆ.

ಪ್ರಯಾಣದ ವೇಳೆ ಕಾಮುಕನೊಬ್ಬ ಯುವತಿಯ ಜತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಲು ಯತ್ನಿಸಿದ್ದಾನೆ. ಇದರಿಂದ ಕೆರಳಿದ ಯುವತಿ ತಕ್ಷಣವೇ ಆತನ ವಿರುದ್ಧ ಆಕ್ರೋಶಗೊಂಡಿದ್ದು, ಇನ್ನೆಂದೂ ಆತ ಮಹಿಳೆಯರನ್ನು ಕಣ್ಣೆತ್ತಿಯೂ ನೋಡಬಾರದು. ಅಂತಹ ಪಾಠ ಕಲಿಸಿದ್ದಾಳೆ. ಸದ್ಯ ಆಕೆಯ ನಡೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬದ್ನೇರಾ ಮತ್ತು ಅಕೋಲಾ ನಡುವಿನ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಕಿರುಕುಳ ನೀಡಿದ ವ್ಯಕ್ತಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಂತೆ ಅಲ್ಲಿದ್ದ ಸಾರ್ವಜನಿಕ‌ರು ಯುವತಿಯ ನೆರವಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಆಕೆ ಮೌನವಾಗಿರದೆ ಶಿಕ್ಷೆಯ ರೂಪವಾಗಿ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ತುಟಿಗೆ ಲಿಪ್‌ಸ್ಟಿಕ್ ಹಚ್ಚಿ, ಕೈ ಬಳೆ ತೊಡಿಸಿ ಆತನ ಮುಖ ಸ್ಪಷ್ಟವಾಗಿ ಕಾಣಿಸುವಂತೆ ವಿಡಿಯೋ ಮಾಡಿದ್ದಾಳೆ.

ಮಹಿಳೆಯರ ತಂಟೆಗೆ ಬಂದರೆ ಸಮಾಜದಲ್ಲಿ ತಲೆ ಎತ್ತಿ ಓಡಾಡದಂತೆ ಮಾಡಬಹುದು ಎಂಬುದನ್ನು ಯುವತಿ ತೋರಿಸಿದ್ದಾಳೆ. ತನಗಾದ ಅನ್ಯಾಯಕ್ಕೆ ಈ ರೀತಿ ಶಿಕ್ಷೆ ನೀಡುವ ಮೂಲಕ ಪ್ರತಿಭಟನೆ ನಡೆಸಿದ್ದಾಳೆ. ಅನೇಕರು ಯುವತಿಯ ಧೈರ್ಯ ಮತ್ತು ಸಹ ಪ್ರಯಾಣಿಕರು ತೋರಿಸಿದ ಒಗ್ಗಟ್ಟನ್ನು ಶ್ಲಾಘಿಸಿದ್ದಾರೆ.

Related Articles

Back to top button
error: Content is protected !!