ಯುವಜನ

ಹಾಸ್ಟೆಲ್‌ನಲ್ಲಿ ಮಂಚಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ವೈದ್ಯೆ ವಿದ್ಯಾರ್ಥಿ ಶವ ಪತ್ತೆ, ಸಾವಿನ ಬಗ್ಗೆ ಪೋಷಕರ ಅನುಮಾನವೇನು?

Views: 61

ಕನ್ನಡ ಕರಾವಳಿ ಸುದ್ದಿ: ಹಾಸ್ಟೆಲ್‌ನಲ್ಲಿ ಮಂಚಕ್ಕೆ ನೇಣುಗಿದ ಸ್ಥಿತಿಯಲ್ಲಿ ಪದವೀಧರೆಯ ಶವ ಪತ್ತೆಯಾಗಿರುವ ಘಟನೆ ಗದಗ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಹಾಸ್ಟೆಲ್‌ನಲ್ಲಿ ನಡೆದಿದೆ.

ಪದವೀಧರೆಯ ಶವ ನಾಗಾವಿ ಬಳಿ ಹಾಸ್ಟೆಲ್‌ನಲ್ಲಿ ಕಂಡುಬಂದಿದೆ. 25 ವರ್ಷದ ವೀಣಾ ಹಾನಾಪುರ ಮೃತ ಪದವೀಧರೆ. ವೀಣಾ ಆರ್ ಡಿಪಿಆರ್ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಳು. ಈಕೆ ಮೂಲತಃ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಮೂಲದವಳು. ವೀಣಾ ಸಾವಿನ ಬಗ್ಗೆ ನಿಖರವಾದ ಮಾಹಿತಿ ಸದ್ಯಕ್ಕೆ ತಿಳಿದು ಬಂದಿಲ್ಲ. ಆದರೆ ನೇಣುಬಿಗಿದ ಸ್ಥಿತಿಯಲ್ಲಿ ವೀಣಾ ಶವ ಪತ್ತೆಯಾದಾಗ, ಕಾಲುಗಳು ನೆಲಕ್ಕೆ ತಾಗಿದ್ದವು, ಬಿಗಿದಿರುವ ಬಟ್ಟೆ ಕೂಡ ಮಗಳದ್ದಲ್ಲ. ಅಲ್ಲದೇ ಮುಖಕ್ಕೆ ಗಾಯಗಳಾಗಿವೆ. ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!