ರಾಷ್ಟ್ರಮಟ್ಟದ ತಯಾರಿ ಇದೀಗ ನಿಮ್ಮ ಊರಲ್ಲೇ- ಮದರ್ ತೆರೆಸಾ ಪಿಯು ಕಾಲೇಜಿನಲ್ಲಿ Vedantu ತಂತ್ರಜ್ಞಾನ ಸಹಭಾಗಿತ್ವ JEE, NEET, KCET, ALL INDIA TEST SERIES
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೊಸ ದಿಕ್ಕು ನೀಡುವ ಮಹತ್ವದ ಹೆಜ್ಜೆ
Views: 75
ಕನ್ನಡ ಕರಾವಳಿ ಸುದ್ದಿ: ಮದರ್ ತೆರೆಸಾ ಪದವಿಪೂರ್ವ ಕಾಲೇಜು ಶಂಕರನಾರಾಯಣದಲ್ಲಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೊಸ ದಿಕ್ಕು ನೀಡುವ ಮಹತ್ವದ ಹೆಜ್ಜೆಯಾಗಿ, ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಯಾದ Vedantu ಜೊತೆಗಿನ ಸಹಯೋಗ ಯೋಜನೆಯನ್ನು ಏಪ್ರಿಲ್ 16ರಂದು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮವನ್ನು ಜೆಇಇ, ಸಿಇಟಿ ತರಬೇತುದಾರರಾದ ಶ್ರೀ ನಾಗರಾಜು ಕೆ.ಜಿ. ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪಪ್ರಾಂಶುಪಾಲರು ಉಪಸ್ಥಿತರಿದ್ದರು.
ಈ ಹೊಸ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಕಾಲೇಜಿನ ದೈನಂದಿನ ಪಠ್ಯಕ್ರಮ, ಸ್ಪರ್ಧಾತ್ಮಕ ತರಗತಿಗಳ ಜೊತೆಗೆ ಅದಕ್ಕೆ ಪೂರಕವಾಗಿ ಪ್ರವೇಶ ಪರೀಕ್ಷೆಗಳಿಗಾಗಿ ಹೆಚ್ಚುವರಿ ಮಾರ್ಗದರ್ಶನ, ಅಭ್ಯಾಸ ಮತ್ತು ದಿನದ 24 ಗಂಟೆಯೂ ಸಂದೇಹ ನಿವಾರಣೆಯ ಸೌಲಭ್ಯ ದೊರೆಯುತ್ತದೆ. ಜೊತೆಗೆ ರಾಷ್ಟ್ರಮಟ್ಟದ ಮಾದರಿ ಪರೀಕ್ಷೆಗಳ ಮೂಲಕ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳೊಂದಿಗೆ ಸ್ಫರ್ಧಿಸುವ ಅವಕಾಶ ಸಿಗುವುದರಿಂದ ವಿದ್ಯಾರ್ಥಿಗಳು ತಮ್ಮ ಮಟ್ಟವನ್ನು ತಿಳಿದುಕೊಂಡು , ಅಂತಿಮ ಪರೀಕ್ಷೆಗೆ ಮುನ್ನವೇ ರಾಷ್ಟ್ರಮಟ್ಟದ ರ‌್ಯಾಂಕ್ ಪಡೆಯುವ ಅನುಭವವನ್ನು ಕೂಡ ಪಡೆಯುತ್ತಾರೆ.
ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಕಾಲೇಜಿನ ತರಗತಿಗಳ ಜೊತೆಗೆ, ಮನೆಯಲ್ಲಿ ಇದ್ದಾಗಲೂ ತಮ್ಮ ಸಮಯಕ್ಕನುಗುಣವಾಗಿ ನಿರಂತರ ಅಭ್ಯಾಸವನ್ನು ಮಾಡಬಹುದು ಹಾಗೂ ಸಂದೇಹಗಳನ್ನೂ ಪರಿಹರಿಸಿಕೊಳ್ಳಬಹುದಾಗಿದೆ.
ಈ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ವಿಶೇಷವಾಗಿ ಉಪಯುಕ್ತವಾಗಲಿದ್ದು, ಅವರ ಶೈಕ್ಷಣಿಕ ಸಾಧನೆಗೆ ಹೊಸ ಉತ್ಸಾಹ ನೀಡಲಿದೆ ಹಾಗೂ ಅವರಿಗೆ ನಿರಂತರ ಅಭ್ಯಾಸ ತರಗತಿಗಳು, ಪರೀಕ್ಷೆಗಳು ಹಾಗೂ Mock Testಗಳನ್ನು ಒದಗಿಸುತ್ತಾ, JEE, NEET ಪರೀಕ್ಷೆಗಳು ಸಮೀಪಿಸುವ ಸಮಯದಲ್ಲಿ ಎರಡು ತಿಂಗಳುಗಳ ಕಾಲ ಪ್ರತಿದಿನ ನಿರಂತರ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳನ್ನು ಪೂರ್ಣಸಿದ್ಧತೆಗೆ ತರಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಾ ಬರುತ್ತಿರುವ ಈ ಸಂಸ್ಥೆ, ಈಗ ಇಂತಹ ಆಧುನಿಕ ಸೌಲಭ್ಯಗಳನ್ನು ಸೇರಿಸಿಕೊಂಡಿರುವುದು ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರಯೋಜನಕಾರಿಯಾಗಲಿದೆ.
ಸಂಸ್ಥೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ಉತ್ತಮ ಶಿಕ್ಷಣ ಹಾಗೂ ರಾಜ್ಯ- ರಾಷ್ಟ್ರಮಟ್ಟದ ಅವಕಾಶಗಳನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು ಮತ್ತು ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.






