ಸಾಂಸ್ಕೃತಿಕ
ಯಕ್ಷ ಚಂದ್ರಿಕೆ ಶಶಿಕಾಂತ್ ಶೆಟ್ಟಿ ಪಾವಂಜೆ ಮೇಳಕ್ಕೆ ಹೊರಡುವ ಮುನ್ನ ಸಾಲಿಗ್ರಾಮ ದೇವಸ್ಥಾನದಲ್ಲಿ ಸೇವೆ
Views: 84
ಕನ್ನಡ ಕರಾವಳಿ ಸುದ್ದಿ: ಪ್ರಸಿದ್ಧ ಯಕ್ಷಗಾನ ಸ್ತ್ರೀ ವೇಷಧಾರಿ ಶಶಿಕಾಂತ್ ಶೆಟ್ಟಿ ಕಾರ್ಕಳ ಕಳೆದ ಕೆಲವು ತಿಂಗಳ ಹಿಂದೆ ನಿಮೋನಿಯಕ್ಕೆ ತುತ್ತಾಗಿ ಜೀವನ್ಮರಣ ಹೋರಾಟ ನಡೆಸಿ ಗುಣಮುಖರಾಗಿ ಮತ್ತೆ ಬಣ್ಣ ಹಚ್ಚಿ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಪಾವಂಜೆ ಮೇಳಕ್ಕೆ ಹೊರಡುವ ಮುನ್ನ ಸಾಲಿಗ್ರಾಮ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ್ದಾರೆ.

ಮರಣದ ಬಾಗಿಲಿನಲ್ಲಿ ನಿಂತು ಮಿರಾಕುಲ್ ಮಾಡಿದ ಅವರು ಮತ್ತೆ ಮರಳಿ ಬರುತ್ತಿದ್ದಾರೆ.ಪ್ರಸ್ತುತ ಆಕರ್ಷಕ ರೂಪ ಮತ್ತು ಪ್ರತಿಭೆಯನ್ನು ಹೊಂದಿರುವ ಉದಯೋನ್ಮುಖ ಸ್ತ್ರೀಪಾತ್ರಧಾರಿಗಳಲ್ಲಿ ಕಾರ್ಕಳ ಶಶಿಕಾಂತ ಶೆಟ್ಟರೂ ಒಬ್ಬರು. ಇವರು ಉಭಯತಿಟ್ಟುಗಳಲ್ಲಿ ಪ್ರವೀಣರು. ವರ್ತಮಾನದಲ್ಲಿ ಬಹು ಬೇಡಿಕೆಯ ಸ್ತ್ರೀಪಾತ್ರಧಾರಿಯಾಗಿ ಮಿಂಚುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ನಿಮ್ಮ ಮುಂದಿನ ಪಯಣ ಸುಖಕರವಾಗಲಿ ಭಗವಂತನ ಸಂಪೂರ್ಣ ಅನುಗ್ರಹ ಆಶೀರ್ವಾದ ಸದಾ ಇರಲಿ ಎಂದು ಶುಭ ಹಾರೈಸಿದ್ದಾರೆ.







