ಸಾಂಸ್ಕೃತಿಕ
ಅಪರಿಚಿತ ವ್ಯಕ್ತಿಯೊಬ್ಬ ಹಿಂಬಾಲಿಸಿಕೊಂಡು ಸ್ಟಾರ್ ನಟಿಯ ಮನೆಯ ಅಂಗಳದಲ್ಲಿ ಪತ್ರವನ್ನು ಇಟ್ಟು ಹೋಗುತ್ತಿದ್ದನಂತೆ!
Views: 65
ಕನ್ನಡ ಕರಾವಳಿ ಸುದ್ದಿ : ನಟಿ ತೇಜಸ್ವಿ ಪ್ರಕಾಶ್ ಕಿರುತೆರೆಯ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು.

ಇತ್ತೀಚೆಗೆ ನಟಿ ಸಂದರ್ಶನವೊಂದರಲ್ಲಿ ಆಘಾತಕಾರಿ ಘಟನೆಯನ್ನು ಹೇಳಿಕೊಂಡಿದ್ದಾರೆ. ಒಂದು ದಿನ ಅಪರಿಚಿತ ವ್ಯಕ್ತಿಯೊಬ್ಬ ಅವರನ್ನು ಹಿಂಬಾಲಿಸಿಕೊಂಡು ಬಂದು ಇದ್ದಕ್ಕಿದ್ದಂತೆ ಅವರ ಮನೆಗೆ ಪ್ರವೇಶಿಸಿದನಂತೆ. ಆ ಸಮಯದಲ್ಲಿ, ತೇಜಸ್ವಿ ಮನೆಯಲ್ಲಿ ಒಬ್ಬಂಟಿಯಾಗಿದ್ದರು.
ಒಬ್ಬ ವ್ಯಕ್ತಿ ನನ್ನನ್ನು ಪ್ರತಿದಿನ ಹಿಂಬಾಲಿಸುತ್ತಿದ್ದ, ನನ್ನ ಮನೆಯ ಅಂಗಳದಲ್ಲಿ ಪತ್ರವನ್ನು ಇಟ್ಟು ಹೋಗುತ್ತಿದ್ದ. ನಾನು ಮನೆಯಿಂದ ಹೊರಗೆ ಬಂದಾಗಲೆಲ್ಲಾ, ಆ ಪತ್ರವನ್ನು ನೋಡುತ್ತಿದ್ದೆ. ಕೊನೆಗೆ, ಭದ್ರತೆಯನ್ನು ಪರಿಗಣಿಸಿ, ಸಿಸಿಟಿವಿ ಕ್ಯಾಮೆರಾ ಫಿಕ್ಸ್ ಮಾಡಿದ್ವಿ. ಆದರೆ ಆ ವ್ಯಕ್ತಿಯನ್ನು ಹಿಡಿಯಲು ಸಾಧ್ಯವಾಗಲಿಲ್ಲ” ಎಂದು ನಟಿ ಹೇಳಿಕೊಂಡರು.






