ಇತರೆ

ದಿವ್ಯಾಂಗ ಮಗಳನ್ನು ರಕ್ಷಿಸಲು ಪ್ರಾಣದ ಹಂಗು ತೊರೆದು ಬಾವಿಗೆ ಹಾರಿದ ತಾಯಿ!  

Views: 57

ಕನ್ನಡ ಕರಾವಳಿ ಸುದ್ದಿ: ತಮ್ಮ ದಿವ್ಯಾಂಗ ಮಗಳನ್ನು ರಕ್ಷಿಸಲು ಪ್ರಾಣದ ಹಂಗು ತೊರೆದು ಬಾವಿಗೆ ಹಾರಿದ ತಾಯಿಯ ಈ ಹೃದಯಸ್ಪರ್ಶಿ ಘಟನೆ ತಮಿಳುನಾಡಿನ ನಂಬಿಯೂರ್ ಬಳಿಯ ಅಯ್ಯಂಕಟ್ಟುವಿನಲ್ಲಿ ನಡೆದಿದೆ.

ఆ ದಿವ್ಯಾಂಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನು ಕಂಡ ಆಕೆಯ 55 ವರ್ಷದ ತಾಯಿ ಮುತ್ತುಮಣಿ ಅವರು ಕ್ಷಣಾರ್ಧವೂ ಯೋಚಿಸದೆ ಮಗಳನ್ನು ಉಳಿಸಲು ಬಾವಿಗೆ ಹಾರಿದ್ದಾರೆ.

ಬಾವಿಯಲ್ಲಿ ಸುಮಾರು 20 ಅಡಿಯಷ್ಟು ನೀರಿತ್ತು. ಮಣಿಯಮ್ಮಾಳ್ ಅವರು ಹರಸಾಹಸ ಪಟ್ಟು ಮಗಳನ್ನು ನೀರಿನ ಮೇಲೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ಬಂದು ತಾಯಿ ಮತ್ತು ಮಗಳಿಬ್ಬರನ್ನೂ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ದಣಿದಿದ್ದರೂ ತಾಯಿ ಮಗಳನ್ನು ಹಿಡಿದುಕೊಂಡಿದ್ದ ಭಾವನಾತ್ಮಕ ದೃಶ್ಯಗಳು ಎಲ್ಲರ ಕಣ್ಣಂಚಲ್ಲೂ ನೀರು ತರಿಸಿತ್ತು. ಮಗಳ ಪ್ರಾಣ ಉಳಿಸಲು ತಾಯಿ ತೋರಿದ ಈ ಹರಸಾಹಸ ಮತ್ತು ಮಾತೃಪ್ರೇಮಕ್ಕೆ ಎಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

 

Related Articles

Back to top button
error: Content is protected !!