ಸಾಮಾಜಿಕ

ಪ್ರೇಮಿಗಳ ದಿನವನ್ನು ಆಚರಿಸಿಕೊಂಡ ಬಳಿಕ ಪತ್ನಿಯನ್ನು ಕೊಲೆ ಮಾಡಿ ದರೋಡೆ ಕಥೆ ಕಟ್ಟಿದ ಪತಿರಾಯ! 

Views: 32

ಕನ್ನಡ ಕರಾವಳಿ ಸುದ್ದಿ: ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡ ಕೆಲವೇ ಗಂಟೆಯಲ್ಲಿ ಪತಿಯೇ ಪತ್ನಿಯನ್ನು ಭೀಕರವಾಗಿ ಕೊಲೆಗೈದಿರುವ ಘಟನೆ ಹರಿಯಾಣದ ಬಹದ್ದೂರ್‌ಗಡ್‌ನಲ್ಲಿ ನಡೆದಿದೆ.ಕಳೆದ ವರ್ಷ ಸೆ.25 ರಂದು ಅಂಶುಲ್ -ಮಹಕ್ ವಿವಾಹವಾಗಿತ್ತು.

ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ ಆಗಿದ್ದ ಮೆಹಕ್ ಪತಿ,  ಅಂಶುಲ್‌ ಧವನ್ ಜತೆ ಫೆ.14ರ ಸಂಜೆ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡಿದ್ದರು. ಖುಷ್ ಖುಷಿಯಲ್ಲೇ ಡಿನ್ನ‌ರ್ ಮಾಡಿಕೊಂಡು ಮನೆಗೆ ಬಂದಿದ್ದರು.

ಪ್ರೇಮಿಗಳ ದಿನವನ್ನು ಆಚರಿಸಿಕೊಂಡು ಮನೆಗೆ ಬಂದ ಬಳಿಕ ಪತಿ ಅಂಶುಲ್ ಧವನ್ ಪತ್ನಿಯ ಜತೆ ವಾಗ್ವಾದ ನಡೆಸಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಅಂಶುಲ್ ಪತ್ನಿ ಮಹಕ್‌ಳ ಉಸಿರಾಟ ನಿಲ್ಲಿಸಿದ್ದಾನೆ. ಆ ಬಳಿಕ ಕತ್ತರಿಯಿಂದ ಕುತ್ತಿಗೆ ಸೀಳಿ ಕೊಲೆಗೈದಿದ್ದಾನೆ

ಪತ್ನಿಯನ್ನು ಕೊಲೆ ಮಾಡಿದ ಬಳಿಕ ಕೃತ್ಯದಿಂದ ಪಾರಾಗಬೇಕೆನ್ನುವ ನಿಟ್ಟಿನಲ್ಲಿ ಅಂಶುಲ್ ಧವನ್ ಸ್ವತಃ ತಾನೇ ಪೊಲೀಸರಿಗೆ ಕರೆ ಮಾಡಿದ್ದಾನೆ. ಮನಗೆ ದರೋಡೆಕೋರರು ಬಂದು, ಪತ್ನಿಯನ್ನು ಕೊಲೆ ಮಾಡಿ ಹೋಗಿದ್ದಾರೆ ಎಂದು ಪೊಲೀಸರಿಗೆ ಹೇಳಿದ್ದಾನೆ.

ಆದರೆ ಪೊಲೀಸರಿಗೆ ಅಂಶುಲ್ ಧವನ್ ಹೇಳಿಕೆಯಲ್ಲಿ ಗೊಂದಲ ಎದ್ದು ಕಂಡಿದೆ. ಈ ಹಿನ್ನೆಲೆ ಆತನನ್ನೇ ಪೊಲೀಸರು  ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ತಾನೇ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

 

Related Articles

Back to top button
error: Content is protected !!