ಯುವಜನ
ಪ್ರೀತಿಸಿದವಳೊಂದಿಗೆ ಮದುವೆಗೆ ಒತ್ತಾಯಿಸಿ ಹೈ-ವೋಲ್ವೇಜ್ ವಿದ್ಯುತ್ ತಂತಿ ಹಿಡಿದು ನೇತಾಡಿದ ಬಾಲಕ!
Views: 52
ಕನ್ನಡ ಕರಾವಳಿ ಸುದ್ದಿ: ಪ್ರೀತಿ ಮಾಡಿದ ಹುಡುಗಿಯೊಂದಿಗೆ ಮದುವೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ 15 ವರ್ಷದ ಬಾಲಕ, ಹೈ-ವೋಲ್ವೇಜ್ ವಿದ್ಯುತ್ ತಂತಿಯನ್ನು ಹಿಡಿದು ನೇತಾಡಿದ ಘಟನೆ ಪ್ರತಾಪಗಢದಲ್ಲಿನಡೆದಿದೆ.
ಕುಟುಂಬದವರು ಮದುವೆಗೆ ಒಪ್ಪದೇ ಇದ್ದ ಕಾರಣ, ಆತ ಈ ರೀತಿಯ ಅಪಾಯಕಾರಿ ಹೆಜ್ಜೆ ಇಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳೀಯರು ಈ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ತಾನು ಇಷ್ಟಪಟ್ಟ ಹುಡುಗಿಯೊಂದಿಗೆ ಮದುವೆ ಮಾಡಿಕೊಡುವುದಾಗಿ ಭರವಸೆ ನೀಡಿದ ನಂತರವೇ ಆತ ಕೆಳಗೆ ಇಳಿಯಲು ಒಪ್ಪಿಕೊಂಡಿದ್ದಾನೆ. ಸುಮಾರು 40 ನಿಮಿಷಗಳ ಕಾಲ ವಿದ್ಯುತ್ ತಂತಿಯನ್ನು ಹಿಡಿದು ನೇತಾಡಿದ ಬಾಲಕನನ್ನು ಕೊನೆಗೆ ಏಣಿ ಬಳಸಿ ಸುರಕ್ಷಿತವಾಗಿ ಕೆಳಗೆ ತರಲಾಯಿತು.






