ಇತರೆ

ಟೆಕ್ಕಿ ಶರ್ಮಿಳಾ ಕೊಲೆ ರಹಸ್ಯ ಬಯಲು: ಅತ್ಯಾಚಾರ ಯತ್ನ ಒಪ್ಪಿಕೊಂಡ ಆರೋಪಿ

Views: 54

ಕನ್ನಡ ಕರಾವಳಿ ಸುದ್ದಿ: ರಾಮಮೂರ್ತಿ ನಗರದಲ್ಲಿ ಟೆಕ್ಕಿ ಶರ್ಮಿಳಾ ಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದ್ದು, ತನಿಖೆ ವೇಳೆ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾನೆ. ನೆರೆಮನೆಯವನೇ ಆದ ಆರೋಪಿ ಕರ್ನಲ್ (18)

ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನುವ ಶಂಕೆ ವ್ಯಕ್ತವಾಗಿತ್ತು. ಮೊದಲಿಗೆ ದೌರ್ಜನ್ಯದ ಆರೋಪ ಕರ್ನಲ್ ತಳ್ಳಿಹಾಕಿದ್ದ. ಆದರೀಗ ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿರುವುದಾಗಿ ಪೊಲೀಸ್ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ. 34 ವಯಸ್ಸಿನ ಟೆಕ್ಕಿ ಶರ್ಮಿಳಾನ್ನು ಪ್ರೀತಿಸುತ್ತಿದ್ದ. ಆಕೆಯ ಹತ್ಯೆಗೂ ಒಂದುವರೆ ತಿಂಗಳಿಂದ ಪ್ರತಿನಿತ್ಯ ಟೆರಸ್ ಮೇಲೆ ಯುವತಿಯ ಚಲನವಲನಗಳನ್ನು ಗಮನಿಸುತ್ತಿದ್ದ. ಶರ್ಮಿಳಾ ಕೆಲಸಕ್ಕೆ ಹೋಗುವಾಗಲೂ ಆಕೆಯನ್ನು ಹಿಂಬಾಲಿಸುತ್ತಿದ್ದ ಯುವಕ, ಕೆಲಸ ಮುಗಿಸಿ ಆಕೆ ವಾಪಸ್ ಬರುವ ವೇಳೆ ಕಾದು ಕೂರುತ್ತಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಹಲವು ದಿನಗಳಿಂದ ಆಕೆಯ ಮೇಲೆ ಕಣ್ಣಿಟ್ಟಿದ್ದ ಆರೋಪಿ ಜನವರಿ 3ರ ರಾತ್ರಿ ಟೆಕ್ಕಿಯ ಮನೆಗೆ ನುಗ್ಗಿ, ಆಕೆಯ ಮೇಲೆ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಪಟ್ಟಿದ್ದಾಗಿ ವಿಚಾರಣೆಯಲ್ಲಿ ಬಾಯ್ದಿಟ್ಟಿದ್ದಾನೆ.

ಶರ್ಮಿಳಾ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ ಸಮಯದಲ್ಲಿ ಆಕೆ ಜೋರಾಗಿ ಕಿರುಚಿಕೊಂಡಿದ್ದರು. ಈ ವೇಳೆ ಆಕೆಯ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿದ್ದ, ಮಹಿಳೆ ಎಷ್ಟೇ ಬೇಡಿಕೊಂಡರೂ ಕನಿಕರವಿಲ್ಲದೆ ಕತ್ತು ಹಿಸುಕಿ ಕೊಲೆ ಮಾಡಿದ್ದ. ಆ ಬಳಕ ಟಿಶ್ಯು ಪೇಪರ್ ಹಾಸಿಗೆ ಮೇಲಿಟ್ಟು ಬೆಂಕಿ ಹಚ್ಚಿದ್ದ ಕಿರಾತಕ, ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಾಲ್ಕನಿ ಡೋರ್ ಮೂಲಕವೇ ಪರಾರಿಯಾಗಿದ್ದ. ಅಗ್ನಿ ಅವಘಡದಿಂದಾಗಿ ಮಹಿಳೆ ಸಾವನ್ನಪ್ಪಿದ್ದಾರೆಂದು ಬಿಂಬಿಸಲು ಹೊರಟಿದ್ದವನ ಸತ್ಯ ವಿಚಾರಣೆ ವೇಳೆ ಹೊರಬಂದಿದೆ.

Related Articles

Back to top button
error: Content is protected !!