ಇತರೆ
ಕುಂದಾಪುರ: ಕೋಣಿಯಲ್ಲಿ ಮನೆಗೆ ನುಗ್ಗಿ ನಗದು- ಚಿನ್ನಾಭರಣ ಕಳ್ಳತನ
Views: 70
ಕನ್ನಡ ಕರಾವಳಿ ಸುದ್ದಿ: ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಚಿನ್ನ ವಾಚ್, ನಗದನ್ನು ಕಳ್ಳತನ ಮಾಡಿದ ಘಟನೆ ಜ. 23ರ ರಾತ್ರಿ 11 ಗಂಟೆಯಿಂದ ಜ. 26ರ ಬೆಳಗ್ಗಿನ ಜಾವ 1.30 ರ ಮಧ್ಯದ ಅವಧಿಯಲ್ಲಿ ಕೋಣಿ ಗ್ರಾಮದ ಕಟ್ಟೇರಿ ಮೇಪು ನಿವಾಸಿ ಆತಿಕಾ ಬಿ. ಅವರ ಮನೆಯಲ್ಲಿ ನಡೆದಿದೆ.
ಆತಿಕಾ ಹಾಗೂ ಇದ್ವಿನ್ ಸಾಹೇಬ್ ದಂಪತಿ ಕುಟುಂಬ ಸಹಿತ ಪ್ರವಾಸಕ್ಕೆ ಹೋಗಿ ದ್ದರು. 3 ದಿನ ಬಿಟ್ಟು ಮರಳಿ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಪಾಟಿನಲ್ಲಿದ್ದ 15 ಸಾವಿರ ರೂ. ಮೌಲ್ಯದ 3 ಗ್ರಾಂ ಚಿನ್ನದ ಉಂಗುರ, 40 ಸಾವಿರ ರೂ. ಮೌಲ್ಯದ 4 ಗ್ರಾಂ ಚಿನ್ನದ ಕಾಯಿನ್, 20 ಸಾವಿರ ರೂ. ಮೌಲ್ಯದ ವಾಚ್ ಹಾಗೂ 20 ಸಾವಿರ ರೂ. ನಗದು ಸಹಿತ ಒಟ್ಟಾರೆ 95 ಸಾವಿರ ರೂ. ಮೌಲ್ಯದ ಚಿನ್ನ ವಾಚ್, ನಗದು ಕಳವಾಗಿದೆ ಎಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.






