ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ 77ನೇ ಗಣರಾಜ್ಯೋತ್ಸವದ ಸಂಭ್ರಮ
Views: 85
ಕನ್ನಡ ಕರಾವಳಿ ಸುದ್ದಿ: ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ 77ನೇಯ ಗಣರಾಜ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಶಾಲೆಯ ಸಂಯೋಜಕರಾಗಿರುವ ಸುಬ್ರಹ್ಮಣ್ಯ ಮರಾಟಿ ಅವರು ನೆರವೇರಿಸಿ ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ಸಂವಿಧಾನದ ಧ್ಯೇಯ, ಆಶೋತ್ತರಗಳು ತಿಳಿಸುತ್ತ, ಹಕ್ಕುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಗಣೇಶ ಮೊಗವೀರರು ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಕೋರಿದರು.
ಸಹಶಿಕ್ಷಕಿಯಾದ ಶ್ರೀಮತಿ ಪೂರ್ಣಿಮಾ ಅವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಸಂವಿಧಾನ ಸಮಿತಿಯ ರಚನೆ, ಮಹತ್ವ,ದೇಶದ ಏಕತೆ ಮೌಲ್ಯಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನೆನಪಿಸಿದರು.
ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ದ್ವಜವಂದನೆಗೈದರು
ಈ ಕಾರ್ಯಕ್ರಮದಲ್ಲಿ ಬೋಧಕ/ ಬೋಧಕೇತರ ವೃಂದದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿಯಾದ ಶ್ರೀಮತಿ ಅನುಷ ಸ್ವಾಗತಿಸಿ , ರೇಷ್ಮಾ ವಂದಿಸಿ, ದಿವ್ಯ ಸುವರ್ಣ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.






