ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಬೆನ್ನಲ್ಲೆ ಸಿಕ್ತು 7 ಹೆಡೆಯ ಘಟಸರ್ಪ ಶಿಲೆ
Views: 75
ಕನ್ನಡ ಕರಾವಳಿ ಸುದ್ದಿ: ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಬೆನ್ನಲ್ಲೇ ಇದೀಗ 7 ಹೆಡೆಯ ಘಟಸರ್ಪ ನಾಗಶಿಲೆ ಪತ್ತೆಯಾಗಿದೆ.
ರವದಿ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಸುಮಾರು ನೂರಾರು ವರ್ಷಗಳಷ್ಟು ಹಳೆಯದಾದ, ಏಳು ಹೆಡೆಗಳನ್ನು ಹೊಂದಿರುವ ಹಾಗೂ ಹಣೆಯ ಮೇಲೆ ನಾಗಮಣಿಯಂತಹ ಅಮೂಲ್ಯ ಕೆತ್ತನೆಯಿರುವ ನಾಗಶಿಲೆ ಪತ್ತೆಯಾಗಿರೋದು ಕುತೂಹಲ ಹುಟ್ಟಿಸಿದೆ.
ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿರುವ ರವದಿ ಕುಟುಂಬದ ಜಮೀನಿನ ಬಾವಿಯ ಪಕ್ಕದಲ್ಲಿ ಈ ಶಿಲೆ ಸಿಕ್ಕಿದೆ. ಈ ಶಿಲೆಯಲ್ಲಿ ಹಾವಿನ ಏಳು ಹೆಡೆಗಳನ್ನು ಅತ್ಯಂತ ನೈಪುಣ್ಯತೆಯಿಂದ ಕೆತ್ತಲಾಗಿದೆ. ಇದು ಉಬ್ಬು ಚಿತ್ರದ ಮಾದರಿಯಲ್ಲಿದೆ. ವಿಶೇಷ ಅಂದ್ರೆ, ಹಾವಿನ ಹಣೆಯ ಭಾಗದಲ್ಲಿ ವಜ್ರ ಅಥವಾ ನಾಗಮಣಿಯ ಆಕಾರದ ಕೆತ್ತನೆಯಿದೆ.
ವಿಜಯನಗರ ಸಾಮ್ರಾಜ್ಯದ ಕಾಲದ ಕೆತ್ತನೆಯ ಶೈಲಿಯನ್ನು ಈ ಶಿಲೆ ಹೋಲುತ್ತದೆ ಎನ್ನಲಾಗಿದೆ. ಹನ್ನೆರಡನೇ ಶತಮಾನದ ಅನೇಕ ಕಲ್ಲುಗಳು ಮತ್ತು ವಿಗ್ರಹಗಳು ಈಗಾಗಲೇ ಇಲ್ಲಿ ಪತ್ತೆಯಾಗಿವೆ. ಅಲ್ಲದೆ, ಹಳೆಯ ಮನೆಗಳು ಮತ್ತು ತೋಟದ ಮನೆಗಳ ಗೋಡೆಗಳಲ್ಲಿ ಚಾಲುಕ್ಯ ಮತ್ತು ರಾಷ್ಟ್ರಕೂಟರ ಕಾಲದ ಶಿಲೆಗಳು ಗೋಚರಿಸಿವೆ.ಇದು ಲಕ್ಕುಂಡಿಯ ಇತಿಹಾಸದ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಲಿದೆ.






