ಇತರೆ

ಕುಂದಾಪುರ: ಕೆದೂರು ರೈಲ್ವೇ ಸೇತುವೆಯ ಮೇಲಿನಿಂದ ಟ್ರಾಕ್‌ ಗೆ ಹಾರಿ ಗಂಭೀರ ಗಾಯಗೊಂಡ ವ್ಯಕ್ತಿ ಸಾವು

Views: 114

ಕುಂದಾಪುರ: ರೈಲ್ವೇ ಸೇತುವೆಯ ಮೇಲಿನಿಂದ ರೈಲ್ವೇ ಟ್ರಾಕ್‌ ಗೆ ಹಾರಿ ಗಂಭೀರ ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿದ ಘಟನೆ ಕೆದೂರಿನಲ್ಲಿ ನಡೆದಿದೆ.

ಕೆದೂರು ಪ್ರತಾಪ್ ನಗರ ನಿವಾಸಿ ಅಣ್ಣಪ್ಪ (55) ಮೃತಪಟ್ಟವರು.

ಅಣ್ಣಪ್ಪರವರು ಕೂಲಿ ಕೆಲಸ ಮಾಡಿಕೊಂಡಿದ್ದು. ಅವರು ತುಂಬಾ ಸಮಯದಿಂದ ಮದ್ಯ ಸೇವನೆ ಮಾಡಿಕೊಂಡಿದ್ದು ಕುಡಿತದಿಂದಾಗಿ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರು ದಿನಾಂಕ 23/01/2026 ರಂದು ಅಣ್ಣಪ್ಪ ರವರು ಮಧ್ಯಾಹ್ನ ಸುಮಾರು 2:00 ಗಂಟೆಗೆ ರೈಲ್ವೇ ಸೇತುವೆಯ ಮೇಲಿನಿಂದ ರೈಲ್ವೇ ಟ್ರಾಕ್‌ ಗೆ ಹಾರಿ ಗಾಯಗೊಂಡವರನ್ನು ಮೇಲಕ್ಕೆ ತಂದು ಉಪಚರಿಸಿ ಅಂಬ್ಯುಲೆನ್ಸ್‌ ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರು ಪರೀಕ್ಷಿಸಿ ಚಿಕಿತ್ಸೆಯನ್ನು ನೀಡಿದ್ದು, ಚಿಕಿತ್ಸೆಯಲ್ಲಿರುತ್ತಾ ಸಂಜೆ 4:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.ಈ ಬಗ್ಗೆ ಕೋಟ ಠಾಣಾ ಯು.ಡಿ.ಆರ್ ಕ್ರಮಾಂಕ 03/2026 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.

Related Articles

Back to top button
error: Content is protected !!