ಶಿಕ್ಷಣ
ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ದತ್ತು ಸ್ವೀಕಾರಕ್ಕೆ ನಿರ್ಧಾರ
ಶ್ರೀ ಅಪ್ಪಣ್ಣ ಹೆಗ್ಡೆಯವರ 91ನೇ ಜನ್ಮ ದಿನಾಚರಣೆಯ ಅಂಗವಾಗಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ನಿಟ್ಟಿನಲ್ಲಿ 25 ವಿದ್ಯಾರ್ಥಿಗಳ ದತ್ತು ಸ್ವೀಕಾರ
Views: 32
ಕನ್ನಡ ಕರಾವಳಿ ಸುದ್ದಿ: ಕಳೆದ ಇಪ್ಪತ್ತು ವರ್ಷಗಳಿಂದ ಗುಣಮಟ್ಟದ ಶಿಕ್ಷಣ ನೀಡಿ ವಿಶಿಷ್ಟ ಶೈಕ್ಷಣಿಕ ಪರಂಪರೆಯನ್ನು ಹುಟ್ಟುಹಾಕಿದ ವಕ್ವಾಡಿ ಗುರುಕುಲ ವಿದ್ಯಾ ಸಂಸ್ಥೆಯು ಸರ್ವಶ್ರೀ ಅಪ್ಪಣ್ಣ ಹೆಗ್ಡೆಯವರ 91ನೇ ಜನ್ಮ ದಿನಾಚರಣೆಯ ಅಂಗವಾಗಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ನಿಟ್ಟಿನಲ್ಲಿ 25 ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಲು ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನಿರ್ಧರಿಸಿದೆ.
ಸಿಬಿಎಸ್‌ಸಿ, ರಾಜ್ಯ ಹಾಗೂ ಐಸಿಎಸ್ಇ ಪಠ್ಯಕ್ರಮವನ್ನು ಒಳಗೊಂಡ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 1/2/2026 ಹಾಗೂ 8/2/2026 ರಂದು ಅನುಕ್ರಮವಾಗಿ ಪೂರಕ ಪರೀಕ್ಷೆ ನಡೆಸಲಾಗುವುದು. ವಾಣಿಜ್ಯ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಯಲಿದ್ದು, ಸಮಾಜ ವಿಜ್ಞಾನ ಗಣಿತ ವಿಷಯಗಳಲ್ಲಿ ಬಹು ಆಯ್ಕೆಯ ಮಾದರಿ (MCQ) ಹಾಗೂ ಇಂಗ್ಲೀಷ್ ನಲ್ಲಿ ಸಾಮರ್ಥ್ಯಾಧಾರಿತ ( APTITUDE ) ಮಾದರಿ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಪೂರ್ವ ತಯಾರಿ ನಡೆಸಲು ತಿಳಿಸಲಾಗಿದೆ.
ಈ ಪರೀಕ್ಷೆಗೆ ಆಫ್ ಲೈನ್ ಹಾಗೂ ಆನ್ ಲೈನ್ ಗಳ ಮೂಲಕ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 8.45 ರಿಂದ 9.45 ರ ತನಕ ದಾಖಲಾತಿಗೆ ಸಮಯವಿದ್ದು, 10 ಗಂಟೆಗೆ ಸರಿಯಾಗಿ ಪರೀಕ್ಷೆ ನಡೆಯಲಿದೆ.
ಈ ಸುವರ್ಣ ಅವಕಾಶವನ್ನು ಪಡೆಯುವ ಸಲುವಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಯಲ್ಲಿ ಭಾಗವಹಿಸಬೇಕೆಂದು ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀ ಕೆ ಸುಭಾಶ್ಚಂದ್ರ ಶೆಟ್ಟಿ ಹಾಗೂ ಶ್ರೀಮತಿ ಅನುಪಮಾ ಎಸ್ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಪರ್ಕ ಮೊಬೈಲ್ ಸಂಖ್ಯೆ – 9731250 367






