ಕುಂದಾಪುರ: ಕಂದಾಯ ಇಲಾಖೆ ಎಡಿಷನಲ್ ಕಮೀಷನರ್ ಬಿ.ಉದಯ ಕುಮಾರ ಶೆಟ್ಟಿ ಅವರಿಗೆ ಸನ್ಮಾನ
Views: 120
ಕನ್ನಡ ಕರಾವಳಿ ಸುದ್ದಿ: ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹೊಂಬಾಡಿ -ಮಂಡಾಡಿ (ಸುಣ್ಣಾರಿ) ಇದರ ವಿವೇಕೋತ್ಸವದ ಕಾರ್ಯಕ್ರಮದಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಎಡಿಷನಲ್ ಕಮೀಷನರ್ ಬಿ. ಉದಯ ಕುಮಾರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ಕುಂದಾಪುರದ ಶಾಸಕರಾದ ಕಿರಣ ಕುಮಾರ ಕೊಡ್ಗಿ ಉದಯ ಕುಮಾರ ಶೆಟ್ಟರನ್ನು ಸನ್ಮಾನಿಸಿ, ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅಪರೂಪದ ವ್ಯಕ್ತಿತ್ವ ಉದಯ ಕುಮಾರ ಶೆಟ್ಟರದು ನಿಗರ್ವಿಯಾಗಿ ಯಾವುದೇ ಕೆಲಸವಿದ್ದರು ಅದನ್ನು ಕ್ಷಣ ಮಾತ್ರದಲ್ಲಿ ಸ್ಪಂದಿಸುವ ಮನೋಭಾವ ಹೊಂದಿದವರು ಎಂದು ಶ್ಲಾಘಿಸಿದರು.
ಶಾಲಾ ಸಂಚಾಲಕರಾದ ಎಸ್. ಕಿಶೋರ ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವೈದ್ಯರಾದ ಹಳೆ ವಿದ್ಯಾರ್ಥಿ ರಂಜನ ಕುಮಾರ ಶೆಟ್ಟಿ, ಪಂಚಾಯತ್ ಅಧ್ಯಕ್ಷರಾದ ಜಯಂತಿ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ವಿ. ಚಂದ್ರಶೇಖರ ಹೆಗ್ಡೆ, ಅಧ್ಯಕ್ಷರಾದ ಎಸ್. ಪ್ರಸನ್ನ ಶೆಟ್ಟಿ ಕಾರ್ಯದರ್ಶಿ ರವಿ ಪೂಜಾರಿ ದಬ್ಬೆಕಟ್ಟೆ, ಆಡಳಿತ ಮಂಡಳಿ ಸದಸ್ಯರಾದ ಡಾ. ಉತ್ತಮ ಕುಮಾರ ಶೆಟ್ಟಿ, ಮಂಡಾಡಿ ಲಕ್ಷ್ಮಣ ಶೆಟ್ಟಿ, ಸಂಜೀವ ಶೆಟ್ಟಿ ಕೊರ್ಗಿ, ರಘುರಾಮ ಶೆಟ್ಟಿ ಕೊಕೂರು, ಮಂಜು. ಎಸ್, SDMC ಅಧ್ಯಕ್ಷೆ ಶ್ರೀಮತಿ ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿದ ಬಿ. ಉದಯ ಕುಮಾರ ಶೆಟ್ಟಿ ಅವರು ಮಾತನಾಡಿ, ತಾನು ಕಲಿತ ಶಾಲೆಯ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು. ಹಾಗೂ ಈ ಶಾಲೆಯ ಅಭಿವೃದ್ಧಿಗೆ ತನ್ನಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿ ಸನ್ಮಾನಿಸಿದಕ್ಕೆ ಕೃತಜ್ಞತೆ ಸಲ್ಲಿಸಿದರು.
ಶಾಲಾ ಶೈಕ್ಷಣಿಕ ಸಲಹೆಗಾರರಾದ ಕಾಳಾವರ ಉದಯ ಕುಮಾರ ಶೆಟ್ಟಿ ಸ್ವಾಗತಿಸಿದರು. ಪಂಚಾಯತ್ ಸದಸ್ಯರಾದ ಗಣೇಶ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಶಾಲಾ ಮುಖ್ಯೋಪಾದ್ಯಾಯಿನಿ ಸುಜಾತ ಶೆಟ್ಟಿ ವಂದಿಸಿದರು. ರಘು ದಬ್ಬೆಕಟ್ಟೆ ಕಾರ್ಯಕ್ರಮ ನಿರೂಪಿಸಿದರು.






