ಮಾಜಿ ಪ್ರಿಯತಮೆಗೆ ಪ್ರೀತಿಸುವಂತೆ ಪೀಡನೆ:ಕೀ ಬಂಚ್ ಚಾಕುವಿನಿಂದ ಇರಿದು ಕೊಂದ ಪ್ರಿಯತಮ
Views: 58
ಕನ್ನಡ ಕರಾವಳಿ ಸುದ್ದಿ: ಸಾಲ ವಸೂಲಾತಿ ನೆಪದಲ್ಲಿ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ, ಮಹಿಳೆಯೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ರಸ್ತೆಯಲ್ಲಿ ಈ ಘಟನೆ ನಡೆದಿದೆ. 27 ವರ್ಷದ ಸುಜಾತ ಹತ್ಯೆಯಾದ ಮಹಿಳೆ. ಚಿರಂಜೀವಿ ಎಂಬಾತ ಈ ಕೊಲೆ ಮಾಡಿದ್ದಾನೆ. ಚಿರಂಜೀವಿ ಈ ಹಿಂದೆ ಸುಜಾತಳನ್ನು ಪ್ರೀತಿಸುತ್ತಿದ್ದ. ಆದರೆ ಸುಜಾತಾ ಆತನ ಪ್ರೀತಿ ನಿರಾಕರಿಸಿದ್ದಳು. ಬೇರೊಂದು ಮದುವೆಯಾಗಿ ಚನ್ನಾಗಿದ್ದಳು.
ಈಕೆ ನರಸಾಪುರ ಕೈಗಾರಿಕಾ ಪ್ರದೇಶದ ‘ಬೆಲ್ರೈಸ್’ ಕಂಪನಿಯಲ್ಲಿ ಸ್ಟಾಫ್ ನರ್ಸ್ ಆಗಿ ಕಳೆದ ಮೂರು ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಯಳಬುರ್ಗಿ ಗ್ರಾಮದ ಹೊಸಕೋಟೆಯ ಖಾಸಗಿ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು.
ಚಿರಂಜೀವಿ ಬ್ಯಾಂಕ್ ವೊಂದರಲ್ಲಿ ಸಾಲ ವಸೂಲಾತಿ ಮಾಡುವ ಕೆಲಸ ಮಾಡುತ್ತಿದ್ದ. ಸಾಲ ವಸೂಲಾತಿ ನೆಪದಲ್ಲಿ ಮನೆಗೆ ಬಂದಿದ್ದಾಗ ಅದು ಸುಜಾತಾಳ ಮನೆ ಎಂದು ಗೊತಾಗಿದೆ. ಹೀಗೆ ಸುಜಾತಾಳ ಜೊತೆ ಮತ್ತೆ ಮಾತುಕತೆ ಆರಂಭವಾಗುತ್ತಿದ್ದಂತೆ ಮತ್ತೆ ಸುಜಾತಾಳಿಗೆ ತನ್ನನ್ನು ಪ್ರೀತಿಸುವಂತೆ ಪೀಡಿಸಲಾರಂಭಿಸಿದ್ದಾನೆ. ಸಾಲ ವಸೂಲಿ ಹೆಸರಲ್ಲಿ ಪದೇ ಪದೇ ಮನೆ ಬಳಿ ಬಂದು ಕಿರಿಕಿರಿ ಮಾಡುತ್ತಿದ್ದನಂತೆ. ಅಸಲಿಗೆ ಚಿರಂಜೀವಿಗೂ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದಾಗ್ಯೂ ಸುಜಾತಾಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇಂದು ಕೂಡ ಮನೆ ಬಳಿ ಬಂದ ಚಿರಂಜೀವಿಗೆ ಸುಜಾತಾ ಬೈದಿದ್ದಾಳೆ. ಇದೇ ವಿಚಾರವಾಗಿ ಗಲಾಟೆ ಆರಂಭಿಸಿದ ಚಿರಂಜೀವಿ ತನ್ನ ಕೈಲಿದ್ದ ಕೀ ಬಂಚ್ ನಲ್ಲಿರುವ ಚಾಕುವಿನಿಂದ ಮನಬಂದಂತೆ ಇರಿದು ಕೊಲೆಗೈದಿದ್ದಾನೆ. ಆರೋಪಿಯನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.






