ಕುಂದಾಪುರ- ಹೊಸಂಗಡಿ – ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಮೇಲ್ದರ್ಜೆಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ
Views: 768
ಕನ್ನಡ ಕರಾವಳಿ ಸುದ್ದಿ: ಕುಂದಾಪುರದಿಂದ ಹೊಸಂಗಡಿ ಮೂಲಕ ತೀರ್ಥಹಳ್ಳಿಗೆ ಹೋಗುವ ರಾಜ್ಯ ಹೆದ್ದಾರಿ-52ನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುಂತೆ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಬೆಂಗಳೂರು ತಲುಪಲು ಇರುವ ಕುಂದಾಪುರ ಮತ್ತು ತೀರ್ಥಹಳ್ಳಿಯನ್ನು ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿ 52ನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ರಾಜ್ಯ ಸರಕಾರವು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆದಿದೆ.
ಈ ಯೋಜನೆಯು ಜಾರಿಯಾದಲ್ಲಿ ಕರಾವಳಿ ಮತ್ತು ಮಲೆನಾಡಿನ ನಡುವಿನ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಹೊಸಂಗಡಿ- ಸಿದ್ದಾಪುರ -ಕುಂದಾಪುರ ರಸ್ತೆಯ 46.40 ಕಿ.ಮೀ ನಿಂದ 88 ಕಿ.ಮೀ ವರೆಗಿನ ಹಂತ ಹೊಂದಿದ್ದು ರಸ್ತೆಯ ಒಟ್ಟು ಉದ್ದ 93.57 ಕಿ.ಮೀ ಆಗಿದೆ. ಇತರ ರಾಷ್ಟ್ರೀಯ ಹೆದ್ದಾರಿಗಳ ಹಾದು ಹೋಗುವಿಕೆ ಹೊರತುಪಡಿಸಿ 87.97 ಕಿ.ಮೀ ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಈ ರಸ್ತೆಯು ಕುಂದಾಪುರದಿಂದ ಬಸ್ರೂರು, ಸಿದ್ದಾಪುರ, ಹೊಸಂಗಡಿ, ನಗರ ಮತ್ತು ಹುಲಿಕಲ್ ಘಾಟಿ ಮೂಲಕ ಸಾಗಿ ತೀರ್ಥಹಳ್ಳಿಯನ್ನು ತಲುಪುತ್ತದೆ.
ಭಾರಿ ಮಳೆಯ ಸಂದರ್ಭದಲ್ಲಿ ಆಗುಂಬೆ ಘಾಟಿ ರಸ್ತೆ ಬಂದ್ ಆದಾಗ, ಕುಂದಾಪುರದಿಂದ ತೀರ್ಥಹಳ್ಳಿ ಮೂಲಕ ಬೆಂಗಳೂರಿಗೆ ಸಂಚರಿಸಲು ಇದು ಪ್ರಮುಖ ಬೈಪಾಸ್ ರಸ್ತೆಯಾಗಿ ಕಾರ್ಯನಿರ್ವಹಿಸುತ್ತದೆ. ಬಸ್ರೂರು, ಸಿದ್ದಾಪುರ ಮತ್ತು ಹೊಸಂಗಡಿಯ ಮೂಲಕ ಉಡುಪಿ, ಕೊಲ್ಲೂರು ಮೊದಲಾದ ಐತಿಹಾಸಿಕ, ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಸಂಪರ್ಕಿಸಬಹುದು. ಹೊಸಂಗಡಿಯಲ್ಲಿರುವ ವಾರಾಹಿ ಜಲವಿದ್ಯುತ್ ಯೋಜನೆಗೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ.
‘






