ಸುದೀಪ್ ಮಾತಿಗೆ ಟಕ್ಕರ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ:ಮತ್ತೆ ಮುನ್ನೆಲೆಗೆ ಬಂದ ಸ್ಟಾರ್ ವಾರ್
Views: 72
ಕನ್ನಡ ಕರಾವಳಿ ಸುದ್ದಿ: ನಟ ಸುದೀಪ್ ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಚಿತ್ರದ ಪ್ರೀ ರಿಲೀಸ್ ಈವೆಂಟ್ನಲ್ಲಿ ಸುದೀಪ್ ಆಡಿದ ಅದೊಂದು ಮಾತು ಮತ್ತೆ ಮಾತಿನ ಯುದ್ದಕ್ಕೆ ವೇದಿಕೆ ಮಾಡಿಕೊಟ್ಟಿದೆ. ಜುಲೈ 5ರಂದು ಒಂದು ಪ್ರಾಮಿಸ್ ಮಾಡಿದ್ದೆ. ಅಂತೆಯೇ ಡಿಸೆಂಬರ್ 25ರಂದು ನಮ್ಮ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತಾ ಇದೆ. ಈ ವೇದಿಕೆ ಮೇಲಿಂದ ಹೇಳ್ತಾ ಇದ್ದೇನೆ. ನಾವು ಯುದ್ಧಕ್ಕೆ ಸಿದ್ಧ, ಏಕೆಂದರೆ ನಾವು ನಮ್ಮ ಮಾತಿಗೆ ಬದ್ಧ ಎಂದು ಸುದೀಪ್ ಹೇಳಿದ್ದರು. ಇದು ದರ್ಶನ್ ಅಭಿಮಾನಿಗಳನ್ನೇ ಗುರಿಯಾಗಿಸಿಕೊಂಡು ಆಡಿದ ಮಾತು ಎಂದು ಕೆಲವರು ಭಾವಿಸಿದ್ದು, ಈ ವಾರ್ಗೆ ಕಾರಣವಾಗಿದೆ.
ಸುದೀಪ್ ಗೆ ವಿಜಯಲಕ್ಷ್ಮಿ ಟಕ್ಕರ್: ಇತ್ತ ಸುದೀಪ್ ಮಾತಿಗೆ ಪರೋಕ್ಷವಾಗಿ ಟಕ್ಕರ್ ಕೊಟ್ಟಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ, “ಅವರು ಇಲ್ಲದೇ ಇರುವಾಗ ಕೆಲವೊಬ್ಬರು ಏನೇನೋ ಮಾತಾಡುತ್ತಾ ಇದ್ದಾರೆ. ವೇದಿಕೆ ಮೇಲೆ, ಚಾನೆಲ್ಗಳಲ್ಲಿ ಕುಡ್ಕೊಂಡು ಮಾತಾಡ್ತಾರೆ. ಜತೆಗೆ ಅವರ ಫ್ಯಾನ್ಸ್ ಬಗ್ಗೆ ಏನೇನೋ ಮಾತನಾಡುತ್ತಾರೆ. ಆದರೆ ದರ್ಶನ್ ಅವರು ಬಂದಾಗ ಅವರು (ಟೀಕಾಕಾರರು) ಬೆಂಗಳೂರಿನಲ್ಲಿ ಇರ್ತಾರೋ ಇಲ್ಲೋ ಅನ್ನೋದೆ ಗೊತ್ತಾಗೋದಿಲ್ಲ. ಅಂತ ಜನಗಳು ದರ್ಶನ್ ಅವರು ಇರುವಾಗ ಎಲ್ಲಿ ಮಾಯ ಅಗಿರ್ತಾರೋ ಗೊತ್ತಾಗೋದಿಲ್ಲ. ದರ್ಶನ್ ಹೇಳಿದಂತೆ ಯಾರೇ ಏನೇ ಹೇಳಿದರೂ ಕೂಡ ಕೋಪ ಮಾಡ್ಕೊಬೇಡಿ, ಬೇಜಾರ್ ಮಾಡ್ಕೊಬೇಡಿ” ಎಂದು ವಿಜಯಲಕ್ಷ್ಮಿ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಇನ್ನು ದರ್ಶನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಟ ಧನ್ನೀರ್ ಗೌಡ ಕೂಡ ಸೋಷಿಯಲ್ ಮೀಡಿಯಾದಲ್ಲಿ ಗುಡುಗಿದ್ದು, ಕಾಡಲ್ಲಿ ಎಲ್ಲಾ ಪ್ರಾಣಿ ಇರುತ್ತೆ, ಆದ್ರೆ ಸಿಂಹನೆ ರಾಜ ಎಂಬ ದರ್ಶನ್ ಡೈಲಾಗ್ ಅನ್ನು ಪೋಸ್ಟ್ ಮಾಡಿದ್ದಾರೆ.






