ರಾಜಕೀಯ

ಚಾಮುಂಡಿ ದರ್ಶನಕ್ಕೆಂದು ಬೆಟ್ಟಕ್ಕೆ ತೆರಳಿದ್ದಾಗ ಕಾಂಗ್ರೆಸ್ ಮಾಜಿ ಶಾಸಕ ಆರ್ ವಿ ದೇವರಾಜ್ ಹೃದಯಾಘಾತದಿಂದ ನಿಧನ 

Views: 60

ಕನ್ನಡ ಕರಾವಳಿ ಸುದ್ದಿ :ಕಾಂಗ್ರೆಸ್ ಮಾಜಿ ಶಾಸಕ ಆರ್ ವಿ ದೇವರಾಜ್ (67) ಚಾಮುಂಡಿ  ತಾಯಿ ದರ್ಶನಕ್ಕೆಂದು ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾಗ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ.

ಡಿಸೆಂಬರ್ 3ರಂದು ಅವರ ಹುಟ್ಟು ಹಬ್ಬವಿದ್ದ ಹಿನ್ನೆಲೆ ಚಾಮುಂಡಿ ದರ್ಶನಕ್ಕೆಂದು ತೆರಳಿದ್ದರು. ಈ ವೇಳೆ ತೀವ್ರ ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾತ್ತು. ಆ ನಂತರ ಹೆಚ್ಚಿನ ಚಿಕಿಕತ್ಸೆಗಾಗಿ ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಆರ್‌ವಿ ದೇವರಾಜ್ ಕೊನೆಯುಸಿರೆಳೆದಿದ್ದಾರೆ. ದೇವರಾಜ್‌ಗೆ ಪತ್ನಿ ಹಾಗೂ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ.

ದೇವರಾಜ್ ಅವರು ಎರಡು ಅವಧಿಗಳ ಕಾಲ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.ನಂತರ 2008ರ ಕ್ಷೇತ್ರ ಮರುನಿರ್ದೇಶನ ವೇಳೆ ಚಾಮರಾಜಪೇಟೆಯ ಭಾಗಗಳು ಹೊಸ ಚಿಕ್ಕಪೇಟೆ ಕ್ಷೇತ್ರಕ್ಕೆ ಸೇರ್ಪಡೆಯಾದಾಗ, ದೇವರಾಜ್ ಅವರು ಆ ಹೊಸ ಕ್ಷೇತ್ರಕ್ಕೆ ಸ್ಥಳಾಂತರಗೊಂಡು ಅಲ್ಲಿಯೂ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದರು

2013ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು, ಪಕ್ಷದ ಬದ್ಧ ಕಾರ್ಯಕರ್ತ ಹಾಗೂ ತಮ್ಮ ಅನುಭವದ ಬಲದಿಂದ ಗೆಲುವು ಸಾಧಿಸಿ ಚಿಕ್ಕಪೇಟೆ ಕ್ಷೇತ್ರದ ಶಾಸಕರಾಗಿ ಪುನರಾಯ್ಕೆಯಾದರು. ಆದರೆ, 2018ರ ಚುನಾವಣೆಯಲ್ಲಿ ದೇವರಾಜ್ ಅವರು ಆ ಚುನಾವಣೆಯಲ್ಲಿ ಸೋಲ ಅನುಭವಿಸಬೇಕಾಯಿತು.

Related Articles

Back to top button