ಜನಮನ

ವಾಕಿಂಗ್ ಹೋಗುವಾಗ ನಾಯಿ ಮುದ್ದಿಸುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ

Views: 123

ಕನ್ನಡ ಕರಾವಳಿ ಸುದ್ದಿ: ವಾಕಿಂಗ್ ಹೋಗುವಾಗ ನಾಯಿಯನ್ನು ಮುದ್ದುಮಾಡುವ ನೆಪದಲ್ಲಿ ಅಪರಿಚಿತನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಉಪಕಾ‌ರ್ ಲೇಔಟ್‌ನಲ್ಲಿ ನಡೆದಿದೆ.

ವಾಕಿಂಗ್‌ಗೆ ಹೋದ ಯುವತಿಯ ಜತೆಗಿದ್ದ ನಾಯಿಯನ್ನು ಮುದ್ದಿಸುವ ನೆಪದಲ್ಲಿ ಬಂದ ಕಿಡಿಗೇಡಿ ಆಕೆಯನ್ನು ಸ್ಪರ್ಶಿಸಿದ್ದಾನೆ. 25 ವರ್ಷದ ಯುವತಿ ನೀಡಿರುವ ದೂರಿ ನನ್ವಯ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಯುವತಿ ತಮ್ಮ ಸಾಕು ನಾಯಿಯನ್ನು ಮನೆ ಸಮೀಪದಲ್ಲೇ ವಾಕಿಂಗ್‌ಗೆಂದು ಕರೆದುಕೊಂಡು ಬಂದಿದ್ದರು. ಅವರ ಮುಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ, ನಿಮ್ಮ ನಾಯಿಯನ್ನು ಮುಟ್ಟಬಹುದೇ? ಎಂದು ಕೇಳುತ್ತಾ ನಾಯಿಯನ್ನು ಮುದ್ದಿಸಲಾರಂಭಿಸಿದ. ನಂತರ ಯುವತಿ ಮನೆಗೆ ತೆರಳಲು ಮುಂದಾದಾಗ ಏಕಾಏಕಿ ಆಕೆಯ ದೇಹ ಸ್ಪರ್ಶಿಸಿದ್ದಾನೆ. ಗಾಬರಿಗೊಂಡ ಯುವತಿ ಆರೋಪಿಯನ್ನು ತಳ್ಳುವ ಮೂಲಕ ಪ್ರತಿರೋಧವೊಡ್ಡಿದ್ದರು. ಪುನಃ ಆರೋಪಿ ಕಿರುಕುಳ ನೀಡಲು ಯತ್ನಿಸಿದಾಗ ಕಪಾಳಕ್ಕೆ ಬಾರಿಸಿದ್ದರು. ಯುವತಿ ಜೋರಾಗಿ ಕಿರುಚಲಾರಂಭಿಸಿದಾಗ, ಕೆಳಕ್ಕೆ ಬಿದ್ದ ಆಕೆಯ ಸ್ಮಾರ್ಟ್‌ಫೋನ್ ತೆಗೆದು ಕೊಂಡು ಆರೋಪಿ ಪರಾರಿಯಾಗಿದ್ದಾನೆ ಎಂದು ದೂರು ನೀಡಲಾಗಿದೆ. ಯುವತಿ ನೀಡಿದ ದೂರಿನನ್ವಯ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಕಾಯಿದೆಯಡಿ ಹಲ್ಲೆ, ಲೈಂಗಿಕ ಕಿರುಕುಳ, ಕಳ್ಳತನ ಮತ್ತು ಉದ್ದೇಶಪೂರ್ವಕವಾಗಿ ಗಾಯಗೊಳಿಸುವಿಕೆ ಆರೋಪದಡಿ ಎಫ್‌ಐಆ‌ರ್ ದಾಖಲಿಸಿಕೊಂಡಿದ್ದಾರೆ.

ಘಟನೆ ನಡೆದ ಸ್ಥಳದ ಸುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗೆ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Related Articles

Back to top button
error: Content is protected !!