ಸಂಗೀತ ಸಾಮ್ರಾಜ್ಞಿ ಮೈಥಿಲಿ ಠಾಕೂರ್ ಈಗ ಅತ್ಯಂತ ಕಿರಿಯ ಶಾಸಕಿ!
Views: 82
ಕನ್ನಡ ಕರಾವಳಿ ಸುದ್ದಿ: ಬಿಹಾರ ಮೂಲದ ಮೈಥಿಲಿ ಮತ್ತು ಭೋಜ್‌ಪುರಿ ಜಾನಪದ ಗಾಯಕಿ ಮೈಥಿಲಿ ಠಾಕೂರ್, ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದು, 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಜುಲೈ 25, 2000 ರಂದು ಜನಿಸಿದ ಠಾಕೂರ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ದರ್ಭಂಗಾ ಜಿಲ್ಲೆಯ ಅಲಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಅವರ ಉಮೇದುವಾರಿಕೆಯನ್ನು ಉತ್ತರ ಬಿಹಾರದಲ್ಲಿ ಬಿಜೆಪಿಯ ಯುವ ಮತ್ತು ಸಾಂಸ್ಕೃತಿಕ ಆಕರ್ಷಣೆಯನ್ನು ಬಲಪಡಿಸುವ ಕಾರ್ಯತಂತ್ರದ ಕ್ರಮವೆಂದು ಪರಿಗಣಿಸಲಾಗಿದೆ. ಅಲಿನಗರದಿಂದ ಸುಮಾರು 35 ಕಿಮೀ ದೂರದಲ್ಲಿರುವ ಮಧುಬನಿ ಜಿಲ್ಲೆಯ ಬೆನಿಪಟ್ಟಿಯಿಂದ ಬಂದ ಠಾಕೂರ್, ತಮ್ಮ ಸಹೋದರರಾದ ರಿಷವ್ ಮತ್ತು ಅಯಾಚಿ ಠಾಕೂರ್ ಅವರೊಂದಿಗೆ ಜಾನಪದ ಸಂಗೀತ ಪ್ರದರ್ಶನಗಳಲ್ಲಿ ಭಾಗಿಯಾಗಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿದರು.
ಬಿಹಾರದ ಶ್ರೀಮಂತ ಮನೆತನದ ಮೈಥಿಲಿಯವರು ಭೋಜ್‌ಪುರಿ ಸಂಗೀತ ಸಂಪ್ರದಾಯಗಳನ್ನು ಸಂರಕ್ಷಿಸಿಕೊಂಡು ಅದರಲ್ಲಿ ತಮ್ಮ ಉತ್ಸಾಹವನ್ನು ತೊಡುಗಿಸಿಕೊಂಡಿದ್ದರು. ಅವರು ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ್ ಸೇರಿದಂತೆ ಪುರಸ್ಕಾರಗಳನ್ನು ಗಳಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೇವಲ ಎರಡು ದಿನಗಳ ಮೊದಲು ಬಿಜೆಪಿಗೆ ಸೇರಿದ ಠಾಕೂರ್, “ಪಕ್ಷ ನನಗೆ ಯಾವುದೇ ಕೆಲಸ ವಹಿಸಿದರೂ, ನಾನು ಅದನ್ನು ಪೂರ್ಣ ಸಮರ್ಪಣಾಭಾವದಿಂದ ಮಾಡುತ್ತೇನೆ” ಎಂದು ಹೇಳಿದರು. ಮೈಥಿಯವರ ಪ್ರವೇಶಿಸಿದ ನಂತರ ಈ ಪ್ರದೇಶದ ಬಿಜೆಪಿಯ ಅಭಿಯಾನಕ್ಕೆ ಶಕ್ತಿ ತುಂಬಿದ್ದಾರೆ. ಯುವ ಮತದಾರರನ್ನು ಆಕರ್ಷಿಸಲು ಅವರ ಸಾಂಸ್ಕೃತಿಕ ಜನಪ್ರಿಯತೆಯನ್ನು ಬಳಸಿಕೊಳ್ಳುವ ಆಶಯವನ್ನು ಪಕ್ಷ ಹೊಂದಿದೆ.






