ಇತರೆ

ಬೈಂದೂರು :ಮೇಲ್‌ ಸೇತುವೆ ಕ್ರಾಸ್‌ ಮಾಡುತ್ತಿರುವ ವೇಳೆ ರೈಲು ಡಿಕ್ಕಿಯಾಗಿ ವ್ಯಕ್ತಿ ಸಾವು

Views: 96

ಕನ್ನಡ ಕರಾವಳಿ ಸುದ್ದಿ: ಇಲ್ಲಿನ ನಾಗೂರು ರೈಲ್ವೆ ಬ್ರಿಡ್ಜ್‌ ಕ್ರಾಸ್‌ ಮಾಡುತ್ತಿದ್ದ ವ್ಯಕ್ತಿ ರೈಲು ಬಡಿದು ಮೃತಪಟ್ಟಿದ್ದಾರೆ. ಹೇರೂರು ನಿವಾಸಿ ದಿವಾಕರ ಆಚಾರ್ಯ (56) ಮೃತಪಟ್ಟವರು.

ಮರದ ಕೆಲಸ ಮಾಡಿಕೊಂಡಿದ್ದ ಅವರು ಭಾನುವಾರ ಸಂಜೆ ರೈಲ್ವೆ ಮೇಲ್‌ ಸೇತುವೆ ಕ್ರಾಸ್‌ ಮಾಡುತ್ತಿರುವ ವೇಳೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿರುವ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!