ಇತರೆ

ಬೀಜಾಡಿ ನಂದಿಕೇಶ್ವರ ದೇವಸ್ಥಾನದ ಘಂಟೆ ಕಳವು: ಕಳ್ಳರನ್ನು ಹಿಡಿಯಲು ಹೋದವರ ಮೇಲೆ ಕಾರು ಹಾಯಿಸಲು ಯತ್ನ!

Views: 33

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಸಮೀಪದ ಬೀಜಾಡಿ ಶ್ರೀ ನಂದಿಕೇಶ್ವರ ದೇವಸ್ಥಾನದ ಘಂಟೆಯನ್ನು ಕಳವು ಮಾಡಿದ ಘಟನೆ ಆ. 15ರ ತಡರಾತ್ರಿ ಸಂಭವಿಸಿದೆ.

ಘಂಟೆಯನ್ನು ಯಾರೋ ಕಳ್ಳರು ಕಳವು ಮಾಡಲು ಬಂದಾಗ ಆ ದೇವಸ್ಥಾನ ಸಮೀಪದ ಮನೆಯ ನಿವಾಸಿ ಗಣೇಶ್ ಅವರು ತಮ್ಮ ಶ್ರೇಯಸ್ ಹಾಗೂ ಧೀರಜ್ ಅವರೊಂದಿಗೆ ತೆರಳಿ ನೋಡಿದ್ದಾರೆ. ಆಗ ಒಬ್ಬ ವ್ಯಕ್ತಿ ಘಂಟೆಯನ್ನು ಹಿಡಿದುಕೊಂಡು ಓಡಿ ಹೋಗಿದ್ದಾನೆ. ಸ್ವಲ್ಪ ದೂರದಲ್ಲಿ ನಿಂತಿದ್ದ ಕಾರಿನ ಬಳಿ ಇವರೆಲ್ಲ ತೆರಳಿದಾಗ ಆ ಕಾರಿನಲ್ಲಿ ಕುಳಿತ ವ್ಯಕ್ತಿ ಕಾರನ್ನು ಇವರ ಮೇಲೆ ಹತ್ತಿಸಲು ಪ್ರಯತ್ನಿಸಿದ್ದ ಎನ್ನಲಾಗಿದೆ.

ಅನಂತರ ಊರವರೆಲ್ಲ ಮಾಹಿತಿ ತಿಳಿದು, ಕಾರಿನ ಗುರುತು ಪತ್ತೆ ಹಚ್ಚಿದ್ದು, ಈ ವೇಳೆ ಕಾರಿನಲ್ಲಿದ್ದವ ಮುಜಾಹಿದ್ ಹಾಗೂ ಘಂಟೆ ಕದ್ದು ಓಡಿದವ ಸಫಾದ್ ಎಂದು ತಿಳಿದು ಬಂದಿದೆ.

ಈ ಆರೋಪಿಗಳು ಘಂಟೆಯನ್ನು ಕಳ್ಳತನ ಮಾಡಿದ್ದಲ್ಲದೆ, ಹಿಡಿಯಲು ಬಂದವರ ಮೇಲೆ ಕಾರನ್ನು ಹಾಯಿಸಿ, ಸಾಯಿಸಲು ಪ್ರಯತ್ನಿಸಿದ್ದಾರೆ ಎಂದು ಗಣೇಶ್ ಬೀಜಾಡಿ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related Articles

Back to top button
error: Content is protected !!