ಗಂಗೊಳ್ಳಿ- ಕುಂದಾಪುರ ನಡುವೆ ಬಾರ್ಜ್ ಸೇವೆ ಕನಸುಗಾರ ಕೋಡಿ ಶರತ್ ಕುಮಾರ್ ಆತ್ಮಹತ್ಯೆಗೆ ಶರಣು
Views: 367
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಕೋಡಿಯ ಶರತ್ ಕುಮಾರ್ (54) ರಕ್ತದೊತ್ತಡ ಹಾಗೂ ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಪಡೆದರೂ ಸಹ ಗುಣಮುಖರಾಗಿರುವುದಿಲ್ಲ. ಇದೇ ವಿಚಾರದಲ್ಲಿ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಅಗಸ್ಟ್ 14ರಂದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಹೋದರ ಗೋಪಾಲಕೃಷ್ಣ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂದಾಪುರ ಪಂಚಗಂಗಾವಳಿಗೆ ಬಾರ್ಜ್ ಸೇವೆ ಒದಗಿಸಲು ಹೋರಾಟಗಾರ: ಕೋಡಿ ಶರತ್ ಕುಮಾರ್
ಶ್ರೀ ಕ್ಷೇತ್ರ ಸಿಗಂದೂರು ಸಂಪರ್ಕಿಸಲು ಶರಾವತಿ ಹಿನ್ನೀರಿನಲ್ಲಿ ದೇಶದ ಎರಡನೇ ಅತಿ ಉದ್ದವಾದ ಕೇಬಲ್ ಸೇತುವೆ ನಿರ್ಮಾಣದ ನಂತರ ಅಲ್ಲಿ ಬಳಕೆಯಲ್ಲಿದ್ದು, ನೆನೆಗುದಿಗೆ ಬಿದ್ದ ಬಾರ್ಜ್ ನ್ನು ಗಂಗೊಳ್ಳಿ-ಕುಂದಾಪುರ ನಡುವಿನ ಸಂಪರ್ಕಕ್ಕೆ ಬಳಸಬೇಕು ಎಂದು ಶರತ್ ಕುಮಾರ್ ಪತ್ರಿಕೆ ಮುಖಾಂತರ ಅಗ್ರಹಿಸಿದ್ದರು.
ಸಿಗಂದೂರು ಸಂಪರ್ಕಕ್ಕೆ ಬಳಸುತ್ತಿದ್ದ ಬಾರ್ಜ್ ಸೇವೆ ನೂತನ ಸೇತುವೆ ನಿರ್ಮಾಣದ ನಂತರ ನಿಲ್ಲಿಸಲಾಗಿದೆ. ಆ ಬಾರ್ಜ್ ಅನ್ನು ಗಂಗೊಳ್ಳಿ- ಕುಂದಾಪುರ ನಡುವೆ ಸಂಪರ್ಕ ಕಲ್ಪಿಸಲು ಪಂಚಗಂಗಾವಳಿ ನದಿಗೆ ಒದಗಿಸಬೇಕು ಎಂದು ಶರತ್ ಕುಮಾರ್ ಸ್ಥಳೀಯರೊಂದಿಗೆ ಅಗ್ರಹಿಸಿದ್ದರು.






