ರೈಲಿನಲ್ಲಿ ರಂಪಾಟ ಮಾಡಿದ ಸೀರಿಯಲ್ ನಟಿ: ಸಿಬ್ಬಂದಿ ಮೇಲೆಯೇ ಹಲ್ಲೆ, ನಟಿ ಬಂಧನ
Views: 35
ಕನ್ನಡ ಕರಾವಳಿ ಸುದ್ದಿ: ಸ್ವೀಪರ್ ಕೋಚ್ ರೈಲಿನ ಟಿಕೆಟ್ ಹಿಡಿದು ಎಸಿ ಕೋಚ್ ಹತ್ತಿದ ನಟಿ ಹಾಗೂ ಮಾಡೆಲ್ ಅಂತರಾ ಬ್ಯಾನರ್ಜಿ ಅವರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಅರಾವಳಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಸದ್ಯ ಅಂತರಾ ಜಾಮೀನು ಪಡೆದು ಹೊರ ಬಂದಿದ್ದಾರೆ. ಹಿಂದಿ ಟಿವಿ ಧಾರಾವಾಹಿ ಮೂಲಕ ಜನಪ್ರಿಯವಾಗಿರುವ 31ರ ಹರೆಯದ ನಟಿ ಅಂತರಾ ಬ್ಯಾನರ್ಜಿ ಶೂಟಿಂಗ್‌ಗಾಗಿ ಬಾಂದ್ರಾ, ಗಂಗಾನಗರ ಆರಾವಳಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮುಂಬೈನಿಂದ ಗುಜರಾತ್‌ಗೆ ಪ್ರಯಾಣ ಬೆಳೆಸಿದ್ದರು. ಆದರೆ ಸ್ವೀಪರ್ ಟಿಕೆಟ್ ಬುಕ್ ಮಾಡಿದ್ದ ಅಂತರಾ ಎಸಿ ಕೋಚ್ ಹತ್ತಿದ್ದರು. ಇತ್ತ ಎಸಿ ಕೋಚ್ ಬುಕ್ ಮಾಡಿದ ಪ್ರಯಾಣಿಕ ಆಗಮಿಸಿದಾಗ ಸೀಟು ಬಿಟ್ಟುಕೊಡದೆ ಆತನೊಂದಿಗೆ ಜಗಳಕ್ಕಿಳಿದಿದ್ದರು. ಪ್ರಯಾಣಿಕ ನೇರವಾಗಿ ರೈಲ್ವೇ ಟಿಸಿ ಹರಿಕೇಶ್ ತ್ರಿಪಾಠಿಗೆ ದೂರು ನೀಡಿದ್ದಾರೆ. ಟಿಸಿ ಸೂಚನೆ ನೀಡಿದ ನಂತರವೂ ನಟಿ ಅಂತರಾ ಸೀಟು ಬಿಟ್ಟುಕೊಟ್ಟಿರಲಿಲ್ಲ. ರೈಲ್ವೆ ಸಿಬ್ಬಂದಿ ಮೇಲೆ ಹಲ್ಲೆ ಮಾಹಿತಿ ತಿಳಿಯುತ್ತಿದ್ದಂತೆ
ಸ್ಥಳಕ್ಕೆ ಆರ್‌ಪಿಎಫ್ ಮಹಿಳಾ ಸಿಬ್ಬಂದಿ ಯಾಮಿನಿಕಾಂತ್ ಮಿಶ್ರಾ ಹಾಗೂ ಪೇದೆ ರಾಜೇಶ್ ಕುಮಾರ್ ಆಗಮಿಸಿದಾಗ ಬ್ಯಾಗ್‌ನಲ್ಲಿದ್ದ ರೇಜರ್ ಬ್ಲಡ್ ತೆಗೆದ ಅಂತರಾ ಮಹಿಳಾ ಆರ್‌ಪಿಎಫ್ ಸಿಬ್ಬಂದಿ ಯಾಮಿನಿಕಾಂತ್ ಮೇಲೆ ದಾಳಿ ಮಾಡಿದ್ದಾರೆ. ಬಟ್ಟೆ ಹರಿದು ಗಾಯಗೊಳಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಅಂತರಾ ಸ್ವತಃ ರೇಜರ್ ಬೇಡ್‌ನಿಂದ ಗಾಯಮಾಡಿಕೊಂಡು ರೈಲ್ವೇ ಸಿಬ್ಬಂದಿಗಳ ಮೇಲೆ ಹಾಕುವ ಪ್ರಯತ್ನ ಮಾಡಿದ್ದಾಳೆ. ಆದರೆ ಎಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿದೆ ಎನ್ನುವುದು ತಿಳಿಯುತ್ತಿದ್ದಂತೆ ಎಸಿ ಕೋಚ್‌ನಿಂದ ಓಡಿ ಹೋಗಲು ಯತ್ನಿಸಿದ್ದಾಳೆ.
ರೈಲ್ವೇ ಪೊಲೀಸರಿಂದ ಬಂಧನ:ರಂಪಾಟ ತೀವ್ರಗೊಳ್ಳುತ್ತಿದ್ದಂತೆ ಬೋಗಿಯ ಬಾಗಿಲು ಕ್ಲೋಸ್ ಮಾಡಿ ರೈಲು ನಿಲ್ದಾಣ ತಲುಪುತ್ತಿದ್ದಂತೆ ರೈಲ್ವೇ ಪೊಲೀಸರು ಆಗಮಿಸಿ ನಟಿ ಅಂತರಾ ಬ್ಯಾನರ್ಜಿಯನ್ನು ಬಂಧಿಸಿದ್ದಾರೆ. ನಟಿ ಸಹಾಯಕ್ಕಾಗಿ ಆಪ್ತರಿಗೆ ಕರೆ ಮಾಡಿದ್ದಾರೆ. ಬಳಿಕ ಜಾಮೀನು ಪಡೆದು ಹೊರಬಂದಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಹಲ್ಲೆ, ಗಂಭೀರ ಗಾಯಕ್ಕೆ ಕಾರಣವಾಗುವುದು ಹಾಗೂ ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟುಮಾಡಿದ ಆರೋಪ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ನಂತರ ಅಂತರಾ ಬ್ಯಾನರ್ಜಿ ಅವರಿಗೆ ನೋಟಿಸ್ ನೀಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.






