ಧರ್ಮಸ್ಥಳ ಪ್ರಕರಣಕ್ಕೆ ಹೊಸ ಟ್ವಿಸ್ಟ್..!! ಸೌಜನ್ಯ ಮಾವ ವಿಠಲ ಗೌಡ ತೋರಿಸಿರುವ ಸ್ಥಳದ ಮರದಲ್ಲಿ ಹಗ್ಗ, ಸೀರೆ, ಮೂಳೆಗಳು ಪತ್ತೆ!

Views: 181
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಮಾವ ವಿಠಲ ಗೌಡ ತೋರಿಸಿರುವ ಬಂಗ್ಲಗುಡ್ಡದಲ್ಲಿ ಎಸ್ ಐಟಿ ಅಧಿಕಾರಿಗಳು ಶೋಧ ನಡೆಸಿದ್ದು, ಈ ವೇಳೆ ರಾಶಿ ರಾಶಿ ಮೂಳೆಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.
ಬಂಗ್ಲಗುಡ್ಡದ ದಟ್ಟ ಅರಣ್ಯದಲ್ಲಿ 5 ಕಡೆ ಮೂಳೆಗಳು, ಬುರುಡೆ ಸಿಕ್ಕಿದೆ. ಇದೇ ವೇಳೆ ಒಂದು ಕಡೆ ಮರದ ಬಳಿ ಅಸ್ಥಿಪಂಜರ, ಹಿರಿಯ ನಾಗರಿಕರ ಕಾರ್ಡ್, ಮರದ ಮೇಲೆ ಎರಡು ಹಗ್ಗ, ಸೀರೆ ಪತ್ತೆಯಾಗಿದೆ. ನೇಣು ಬಿಗಿದುಕೊಂಡಿರುವ ಅನುಮಾನ ವ್ಯಕ್ತವಾಗಿದೆ.
ಸದ್ಯ ಎಸ್ಐಟಿ ಟೀಂ ಎಲ್ಲಾ ವಸ್ತು, ಮೂಳೆಗಳನ್ನು ಸಂಗ್ರಹಿಸಿ ಕಾನೂನು ಪ್ರಕಾರ ತನಿಖೆ ಮುಂದುವರೆಸಿದೆ. ಇದು ಧರ್ಮಸ್ಥಳ ಕೇಸ್ ಗೆ ಮತ್ತೊಂದು ರೀತಿಯ ತಿರುವು ನೀಡಿದೆ.
ಧರ್ಮಸ್ಥಳ ಪ್ರಕರಣ ಸಂಬಂಧ ಸುಜಾತಾ ಭಟ್ ಅವರ ಮಗಳೆಂದು ಹೇಳಿದ್ದ ಅನನ್ಯಾ ಭಟ್ ನಾಪತ್ತೆ ಕಥೆ ಕಟ್ಟಿ ಬೇರೊಬ್ಬರ ಫೋಟೋ ತೋರಿಸಿದ್ದು, ಇದೀಗ ನೈಜ ಫೋಟೊದಲ್ಲಿದ್ದ ಮಹಿಳೆಯ ಮನೆಯವರು ಎಸ್ಐಟಿ ಕಚೇರಿಗೆ ಬಂದು ಹೇಳಿಕೆ ನೀಡಿದ್ದಾರೆ.
ಸುಜಾತಾ ಭಟ್ ಅವರು ಅನನ್ಯಾ ಭಟ್ ಎಂದು ಹೇಳಿ ನೀಡಿದ್ದ ಫೋಟೋ ಕೊಡಗು ಮೂಲದ ವಸಂತಿ ಎಂ.ಪಿ. ಎಂಬಾಕೆಯದ್ದಾಗಿತ್ತು. ಆಕೆ ಮೃತಪಟ್ಟು 18 ವರ್ಷವಾಗಿತ್ತು. ವಸಂತಿ ಎಂ.ಪಿ. ಅವರ ಸಹೋದರ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ನಿವಾಸಿ ವಿಜಯ್ ಅವರಿಗೆ ಎಸ್ಐಟಿ ನೋಟಿಸ್ ನೀಡಿ ಮಾಹಿತಿ ನೀಡಲು ತಿಳಿಸಿತ್ತು. ಗುರುವಾರ ಬೆಳ್ತಂಗಡಿ ಠಾಣೆಗೆ ಬಂದು ದೂರು ನೀಡಿದ್ದಾರೆ.
ಆರೋಪಿ ಚಿನ್ನಯ್ಯನಿಗೆ ನ್ಯಾಯಾಂಗ ಬಂಧನ
ಬಂಧನಕ್ಕೆ ಧರ್ಮಸ್ಥಳ ನೂರಾರು ಶವ ಹೂತ ಪ್ರಕರಣ ಸಂಬಂಧ ಆರೋಪಿ ಚಿನ್ನಯ್ಯನನ್ನು ಪೊಲೀಸರು ಗುರುವಾರ ಬೆಳ್ತಂಗಡಿಗೆ ಕರೆದು ಕೊಂಡು ಬಂದು ಕೋರ್ಟಿಗೆ ಹಾಜರುಪಡಿಸಿ, ಮತ್ತೆ ನ್ಯಾಯಾಂಗ ಪಡೆದುಕೊಂಡರು. ಶಿವಮೊಗ್ಗ ಜೈಲಿನಲ್ಲಿ ಬಂಧನದಲ್ಲಿದ್ದ ಚಿನ್ನಯ್ಯನನ್ನು ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆ ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹೆಚ್ಚುವರಿ ವ್ಯವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶ ವಿಜಯೇಂದ್ರ ಅವರ ಮುಂದೆ ಹಾಜರುಪಡಿಸಲಾಯಿತು.ವಿಚಾರಣೆ ನಡೆಸಿದ ಕೋರ್ಟ್ ಮತ್ತೆ ನ್ಯಾಯಾಂಗ ಬಂಧನಕ್ಕೆ ಚಿನ್ನಯ್ಯನನ್ನು ಒಪ್ಪಿಸಿತು.






