ಇತರೆ

ವಿದ್ಯುತ್‌ ಟ್ರಾನ್ಸ್‌ಫಾರ್ಮರ್ ಬಳಿ ಯುವಕನ ಶವ ಪತ್ತೆ!

Views: 23

ಕನ್ನಡ ಕರಾವಳಿ ಸುದ್ದಿ: ವಿದ್ಯುತ್‌ ಟ್ರಾನ್ಸ್‌ಫಾರ್ಮರ್ ಬಳಿ ಯುವಕನೊಬ್ಬನ ಶವ ಪತ್ತೆಯಾಗಿದೆ.

ವಿದ್ಯುತ್ ಶಾಕ್ ಹೊಡೆದು ಯುವಕ ಮೃತಪಟ್ಟಿರಬೇಕು ಎಂದು ಈಗ ನಂಬಲಾಗಿದ್ದು ಪ್ರಯೋಗಾಲಯದ ವರದಿ ಬಳಿಕ ಖಚಿತವಾಗಬೇಕಿದೆ.

ವೃತ್ತಿಯಲ್ಲಿ ಎಲೆಕ್ನಿಷಿಯನ್ ಆಗಿರುವ ಕರಿಯಂಗಳ ಗ್ರಾಮದ ತಂತ್ರಿಬೆಟ್ಟು ನಿವಾಸಿ ಹರೀಶ್ ಟಿ. (38) ಮೃತ ಯುವಕ. ಅವರು ಅವಿವಾಹಿತರು.

ಹರೀಶ್ ಅವರು ಆ.16ರಂದು ಎಂದಿನಂತೆ ಕೆಲಸಕ್ಕೆ ತೆರಳಿದವರು ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ಮನೆಗೆ ಬಂದಿದ್ದರು. ಬಳಿಕ ಊಟ ಮಾಡಿ ಮಲಗಿದ್ದರು. ಆ.17ರಂದು ಬೆಳಿಗ್ಗೆ ಮನೆಯವರು ಎದ್ದು ನೋಡಿದಾಗ ಅವರು ಮನೆಯಲ್ಲಿ ಇರಲಿಲ್ಲ. ಎಲ್ಲಿ ಹೋದರು ಎಂದು ಆಲೋಚನೆ ಮಾಡುತ್ತಿರುವುದರ ನಡುವೆ ಬೆಳಗ್ಗೆ 7.30ರ ಸುಮಾರಿಗೆ ಪುರುಷೋತ್ತಮ ಎಂಬವರು ಮನೆಯವರಿಗೆ ಕರೆ ಮಾಡಿ, ತಂತ್ರಿಬೆಟ್ಟಿನ ಟ್ರಾನ್ಸ್‌ಫಾರ್ಮರ್ ಬಳಿ ಭಾರೀ ಸದ್ದು ಕೇಳಿದೆ. ವಿದ್ಯುತ್ ಸಮಸ್ಯೆ ಉಂಟಾಯಿತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದಾಗ ಹರೀಶ್ ಅವರ ಮೋಟಾರ್ ಸೈಕಲ್ ಕಂಡುಬಂತು. ಅಲ್ಲದೆ ಅವರು ಟ್ರಾನ್ಸ್‌ಫಾರ್ಮರ್ ಬಳಿ ಬಿದ್ದಿದ್ದಾರೆ ಎಂದು ತಿಳಿಸಿದ್ದರು.

ಕೂಡಲೇ ಸ್ಥಳಕ್ಕೆ ತೆರಳಿದ ಮನೆಯವರು ಹರೀಶ್ ಅವರು ಟ್ರಾನ್ಸ್‌ಫಾರ್ಮ‌್ರನ ಕೆಳಭಾಗದಲ್ಲಿ ಬಿದ್ದಿರುವುದನ್ನು ಕಂಡು ಪರಿಶೀಲಿಸಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಬೆಳಿಗ್ಗೆ 6.30ರಿಂದ 7.30ರ ನಡುವಿನ ಅವಧಿಯಲ್ಲಿ ಹರೀಶ್ ಅವರು ಟ್ರಾನ್ಸ್‌ಫಾರ್ಮರ್ ಬಳಿ ತೆರಳಿದ್ದು ಈ ಸಂದರ್ಭ ವಿದ್ಯುತ್ ಪ್ರವಹಿಸಿ ಮೃತಪಟ್ಟಿರಬಹುದೆಂದು ಈಗ ಅಂದಾಜಿಸಲಾಗಿದೆ.

ಯಾವ ಕಾರಣಕ್ಕಾಗಿ ಅವರು ಟ್ರಾನ್ಸ್‌ಫಾರ್ಮರ್ ಬಳಿ ತೆರಳಿದರು ಎಂಬುದು ಸದ್ಯ ನಿಗೂಢವಾಗಿಯೇ ಇದೆ. ಮೃತರ ಸಹೋದರ ದಿನೇಶ್ ಅವರು ನೀಡಿದ ದೂರಿನ ಆಧಾರದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Related Articles

Back to top button
error: Content is protected !!