ಇತರೆ

ಮಂಗಳೂರು ಜಿಲ್ಲಾ ಖಜಾನೆ ಪ್ರಥಮ ದರ್ಜೆ ಸಹಾಯಕ ನಿಗೂಢ ನಾಪತ್ತೆ!

Views: 34

ಕನ್ನಡ ಕರಾವಳಿ ಸುದ್ದಿ: ಮಂಗಳೂರು ನಗರದ ಜಿಲ್ಲಾ ಖಜಾನೆಯ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ರೋಹನ್ ಎಂ(33) ಎಂಬವರು ಆ.1ರಿಂದ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಬೆಂಗಳೂರಿನ ನಂಜಮ್ಮ ಲೇಔಟ್‌ನ ನಿವಾಸಿ ಮುನಿರಾಜ್ ರೆಡ್ಡಿ ಎಂಬವರ ಪುತ್ರ ರೋಹನ್ ಎಂಬವರು ಮಂಗಳೂರಿನ ಜಿಲ್ಲಾ ಖಜಾನೆಯಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಪೌರ್ಣಮಿಯ ಪ್ರಯುಕ್ತ ಗುಜರಾತ್‌ಗೆ ಹೋಗುದಾಗಿ ತೆರಳಿದ್ದ ರೋಹನ್ ಅವರು ಬಳಿಕ ಕಾಣೆಯಾಗಿದ್ದಾರೆ. ಫೋನ್ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ಅವರ ತಂದೆ ಮುನಿರಾಜ್ ರೆಡ್ಡಿ ಅವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Related Articles

Back to top button
error: Content is protected !!