ಇತರೆ

ಕೊಡಚಾದ್ರಿ ಬೆಟ್ಟದಲ್ಲಿ60 ಅಡಿ ಆಳಕ್ಕೆ ಬಿದ್ದ ಪ್ರವಾಸಿಗನ ರಕ್ಷಣೆ

Views: 18

ಕನ್ನಡ ಕರಾವಳಿ ಸುದ್ದಿ: ಕೊಡಚಾದ್ರಿ ಬೆಟ್ಟಕ್ಕೆ ತೆರಳಿದ ಪ್ರವಾಸಿಗನೋರ್ವ ಬೆಟ್ಟದಲ್ಲಿ ಆಯತಪ್ಪಿ ಸುಮಾರು 60 ಅಡಿ ಆಳಕ್ಕೆ ಬಿದ್ದಿರುವುದನ್ನು ಅರಿತ ಸ್ಥಳೀಯ ಜೀಪ್ ಚಾಲಕರು ಆತನನ್ನು ರಕ್ಷಿಸಿದ ಘಟನೆ ರವಿವಾರ ಸಂಜೆ ಸಂಭವಿಸಿದೆ.

ಕುಮುಟಾ ಮೂಲದ ಪ್ರದೀಪ್ ಅವರು ಕೊಡಚಾದ್ರಿ ಬೆಟ್ಟಕ್ಕೆ ತೆರಳಿ ಶಂಕರಾಚಾರ್ಯ ಪೀಠ ಸಮೀಪಿಸುತ್ತಿದ್ದಂತೆ ತಲೆಸುತ್ತಿ ಆಯತಪ್ಪಿ ಆಳಕ್ಕೆ ಬಿದ್ದರು. ಅಲ್ಲೇ ಸಮೀಪದಲ್ಲಿದ್ದ ಇತರ ಪ್ರವಾಸಿಗರು ಆವರು ಬೀಳುತ್ತಿದ್ದಂತೆ ಸಹಾಯಕ್ಕೆ ಮುಂದಾದರು.

ಮಳೆಗಾಲದ ಜಾರು ಬೆಟ್ಟದ ಬಳಿಯಿಂದ ಆತ ಬಿದ್ದ ಸ್ಥಳಕ್ಕೆ ಬಹುದೂರ ಇದ್ದರೂ ಅವರನ್ನು ಉಳಿಸುವ ಬಗ್ಗೆ ಜೀಪ್ ಚಾಲಕರು ಆತಂಕ ಹಾಗೂ ಭಯಾನಕ ಸನ್ನಿವೇಶದಲ್ಲೂ ಭಯಪಡದೆ ಜಾಗ್ರತೆಯಿಂದ ಕಾರ್ಯಚರಣೆ ನಡೆಸಿ ಘಟನೆ ಸಂಭವಿಸಿದ ಸಮಯದಲ್ಲಿ ಆತನನ್ನು ಸುರಕ್ಷಿತವಾಗಿ ಮೇಲಕ್ಕೆ ಕೊಲ್ಲೂರು ನಂತರ ನಿಟ್ಟೂರು ಆಸ್ಪತ್ರೆಗೆ ದಾಖಲಿಸಿದರು.ಪ್ರವಾಸಿಗ ಪ್ರದೀಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Related Articles

Back to top button
error: Content is protected !!