ಶಿಕ್ಷಣ
ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ರೊಬೋಟಿಕ್ ತಂತ್ರಜ್ಞಾನ ಮಾಹಿತಿ ಕಾರ್ಯಾಗಾರ

Views: 15
ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ರೊಬೋಟಿಕ್ ತಂತ್ರಜ್ಞಾನ ಮತ್ತು ಎಐ ತಂತ್ರಜ್ಞಾನದ ಕಾರ್ಯಾಗಾರವನ್ನು ಸೆ.17 ರಂದು ಹಮ್ಮಿಕೊಳ್ಳಲಾಗಿತ್ತು.
ಉಡುಪಿಯ ಟಿಂಕರ್ ಸ್ಪೇಸ್ ನ ರೀಜನಲ್ ಮ್ಯಾನೇಜರ್ ಪ್ರಣಮ್ ಆಚಾರ್ಯ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, ಆಧುನಿಕ ತಂತ್ರಜ್ಞಾನವು ಇಡೀ ಜಗತ್ತನ್ನು ಆಳುತ್ತಿದೆ ಇಂತಹ ಸಂಧರ್ಭದಲ್ಲಿ ನಾವು ಹೆಚ್ಚು ಹೆಚ್ಚು ಹೊಸ ಹೊಸ ವಿದ್ಯಮಾನಗಳಿಗೆ ಒಗ್ಗಿಕೊಂಡು ಹೊಸ ಆವಿಷ್ಕಾರಗಳತ್ತ ಮುಖ ಮಾಡಬೇಕು. ಸ್ಪರ್ಧಾತ್ಮಕವಾದ ಔದ್ಯೋಗಿಕ ರಂಗದಲ್ಲಿ ಹೆಜ್ಜೆ ಹಾಕಬೇಕಾದರೆ ಎಐ ತಂತ್ರಜ್ಞಾನ ಮತ್ತು ರೊಬೋಟಿಕ್ ತಂತ್ರಜ್ಞಾನದಂತಹ ವಿಚಾರಗಳಿಗೆ ಹೆಚ್ಚು ಒಗ್ಗಿಕೊಳ್ಳಬೇಕೆಂದರು.
ಪ್ರಾಂಶುಪಾಲರಾದ ಡಾ .ರೂಪಾ ಶೆಣೈ ಉಪಸ್ಥಿತರಿದ್ದರು. ಜೀವಶಾಸ್ತ್ರ ಉಪನ್ಯಾಸಕ ಲಿಖಿತ್.ಎಚ್ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು. ಭೌತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ರಂಜನಿ ಅವರು ವಂದಿಸಿದರು.