FAMILY HOUR- ತಂದೆ-ತಾಯಿಯರ ಸ್ಪಂದನ.. ಮಕ್ಕಳ ನಗುವಿನ ನಂದನ ” ಮದರ್ ತೆರೆಸಾ ಕಿಂಡರ್ ಗಾರ್ಟನ್ ನಲ್ಲಿ ಅರ್ಥಪೂರ್ಣ ಪೋಷಕರ ಸಭೆ

Views: 384
ಕನ್ನಡ ಕರಾವಳಿ ಸುದ್ದಿ: ಮದರ್ ತೆರೆಸಾ ಕಿಂಡರ್ ಗಾರ್ಟನ್ , ಶಂಕರನಾರಾಯಣದಲ್ಲಿ 13-09 2025ರಂದು ಪೂರ್ವ ಪ್ರಾಥಮಿಕ( ಕಿಂಡರ್ ಗಾರ್ಟನ್ ) ವಿದ್ಯಾರ್ಥಿಗಳ ಪೋಷಕರ ಸಭೆ “FAMILY HOUR – ತಂದೆ ತಾಯಿಯ ಸ್ಪಂದನ… ಮಕ್ಕಳ ನಗುವಿನ ನಂದನ…” ಎಂಬ ಅರ್ಥಪೂರ್ಣ ಶೀರ್ಷಿಕೆಯಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವು ದೀಪಾರಾಧನೆಯ ಮೂಲಕ ಆರಂಭಗೊಂಡಿತು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಡಳಿತ ನಿರ್ದೇಶಕರಾದ ಕುಮಾರಿ ರೆನಿಟಾ ಲೋಬೊ ಅವರು ಮಾತನಾಡಿ, “ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಉಂಟಾಗುವ ದುಷ್ಪರಿಣಾಮಗಳು ಮತ್ತು ಅವನ್ನು ತಡೆಗಟ್ಟಲು ಪೋಷಕರು ಕೈಗೊಳ್ಳಬಹುದಾದ ಮಾರ್ಗಗಳು” ಕುರಿತು ಸಲಹೆ ನೀಡಿದರು. ಇನ್ನೋರ್ವ ನಿರ್ದೇಶಕರಾದ ಕುಮಾರಿ ಶಮಿತಾ ರಾವ್ ಅವರು ವಿದ್ಯಾರ್ಥಿಗಳ ಪ್ರಗತಿ ಪತ್ರದ ಕುರಿತು ಮಾಹಿತಿ ನೀಡುತ್ತಾ, ಪೋಷಕರ ಮತ್ತು ಶಿಕ್ಷಕರ ಪಾತ್ರ ಮಕ್ಕಳ ಶಿಕ್ಷಣ ಮತ್ತು ಬೆಳವಣಿಗೆಯಲ್ಲಿ ಅತ್ಯಂತ ಮುಖ್ಯವೆಂದು ಹೇಳಿದರು.
ಸಭೆಯಲ್ಲಿ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ವಿಮರ್ಶೆ ಮಾಡುವುದರೊಂದಿಗೆ, ಸಂಸ್ಥೆಯಲ್ಲಿ ನೀಡುತ್ತಿರುವ ಗುಣಮಟ್ಟದ ಶಿಕ್ಷಣ ಹಾಗೂ ವೈವಿಧ್ಯಮಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಸಭಾ ಕಾರ್ಯಕ್ರಮದ ತರುವಾಯ ಕುಮಾರಿ ಅಲಿಟಾ ಡೇಸಾ ಅವರು ಪೋಷಕರಿಗಾಗಿ ವೈವಿಧ್ಯಮಯ ಮನರಂಜನಾ ಆಟೋಟ ಸ್ಪರ್ಧೆಗಳನ್ನು ನಡೆಸಿದರು . ಪೋಷಕರು ಉತ್ಸಾಹದಿಂದ ಭಾಗವಹಿಸಿದ್ದು ಮಾತ್ರವಲ್ಲದೆ ಮಕ್ಕಳೊಡನೆ ಮಕ್ಕಳಂತೆ ಸಂಭ್ರಮಿಸಿದರು . ವಿಜೇತರಿಗೆ ಆಡಳಿತ ಮಂಡಳಿಯಿಂದ ಬಹುಮಾನ ಪ್ರಧಾನ ಮಾಡಲಾಯಿತು.
ಈ ಕಾರ್ಯಕ್ರಮವು ಪೋಷಕರ ಸಭೆ ಮಾತ್ರವಾಗಿರದೆ ಪೋಷಕರು, ಶಿಕ್ಷಕರು ಮತ್ತು ಆಡಳಿತ ಮಂಡಳಿಯವರ ಹೃದಯಂಗಮ ಪಾಲ್ಗೊಳ್ಳುವಿಕೆಯಿಂದ ಸಂಬಂಧವನ್ನು ಗಟ್ಟಿಗೊಳಿಸುವಂತಿತ್ತು.
ಈ ಸುಂದರ ಕಾರ್ಯಕ್ರಮವನ್ನು ಶ್ರೀಮತಿ ವೈಶಾಲಿ ಶೆಟ್ಟಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುಮಾರಿ ಅಲಿಟಾ ಡೇಸ ಇವರು ಸ್ವಾಗತಿಸಿದರು.