ಇತರೆ
ಕೊಲ್ಲೂರು: ಜಡ್ಕಲ್ ಅರಣ್ಯದಲ್ಲಿ ಮೃತದೇಹದ ಮೂಳೆ, ಮೊಬೈಲ್ ಇತ್ಯಾದಿ ಪತ್ತೆ

Views: 227
ಕೊಲ್ಲೂರು: ಜಡ್ಕಲ್ ಅರಣ್ಯದಲ್ಲಿ ಮೃತದೇಹದ ಮೂಳೆ, ಮೊಬೈಲ್ ಇತ್ಯಾದಿ ಪತ್ತೆ
ಕನ್ನಡ ಕರಾವಳಿ ಸುದ್ದಿ: ಕೊಲ್ಲೂರು ಹೊಸೂರು ಗ್ರಾಮದ ಜಡ್ಕಲ್ ಏರ್ ಎಂಬಲ್ಲಿಯ ಬೆಳೆಕೋಡ್ಲು ರಸ್ತೆ ಸಮೀಪ ಅರಣ್ಯದಲ್ಲಿ ಮಾನವನ ಮೃತದೇಹದ ಮೂಳೆ ತುಂಡುಗಳು ಪತ್ತೆಯಾಗಿವೆ.
ಅವಶೇಷದ ಸಮೀಪದಲ್ಲಿ ಪ್ಯಾಂಟ್, ಅಂಗಿ, ಮೊಬೈಲ್, ಒಂದು ಜೊತೆ ಚಪ್ಪಲಿ ಕೂಡ ಕಂಡುಬಂದಿದೆ. ಯಾರೋ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಲವು ತಿಂಗಳು ಕಳೆದಿದ್ದು ನೆಲಕ್ಕೆ ಬಿದ್ದ ಶರೀರದ ಭಾಗಗಳನ್ನು ಕಾಡು ಪ್ರಾಣಿಗಳು ತಿಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸ್ಥಳೀಯ ನಿವಾಸಿ ರವಿ ಅವರು ಸೆ. 14ರಂದು ಮೇಯಲು ಬಿಟ್ಟ ದನಗಳನ್ನು ಹುಡುಕುತ್ತಾ ಕಾಡಿಗೆ ತೆರಳಿದಾಗ ಈ ದೃಶ್ಯ ಕಂಡುಬಂದಿದ್ದು, ಕೊಲ್ಲೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿತ್ರ: ಸಾಂದರ್ಭಿಕ