ಇತರೆ
ಕೋಟೇಶ್ವರ: ಗುರಿಕಾರ ಗೋಪಾಲ ಶೆಟ್ಟಿಗಾರ ನಿಧನ

Views: 305
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರದ ನಿವಾಸಿ ಹೋಟೆಲ್ ಉದ್ಯಮಿ, ಗುರಿಕಾರ ಗೋಪಾಲ್ ಶೆಟ್ಟಿಗಾರ್( 87) ಶುಕ್ರವಾರ ಸಂಜೆ ನಿಧನರಾಗಿದ್ದಾರೆ.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಇವರು ಮಹಾರಾಷ್ಟ್ರದ ಸೋಲಾಪುರದ ಉಮಾರ್ಗದಲ್ಲಿ ಹೋಟೆಲ್ ಉದ್ಯಮ ನಡೆಸಿಕೊಂಡು ಬಂದಿದ್ದು, ನಂತರ ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೂಡುಕಟ್ಟಿಗೆ ಸೇರಿದ ಕೋಟೇಶ್ವರ ಮಾಗಣೆಯ ಗುರಿಕಾರರು ಹಾಗೂ ಕೋಟೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘದಲ್ಲಿ ಸಕ್ರಿಯರಾಗಿದ್ದರು.