ವಕ್ವಾಡಿ: ಮನೆಯೊಳಗೆ ಸೇರಿಕೊಂಡ ಬೃಹತ್ ಗಾತ್ರದ ಹೆಬ್ಬಾವು ಸೆರೆ

Views: 611
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಕ್ವಾಡಿಯ ದಿನ ಪತ್ರಿಕೆ ಪೇಪರ್ ಏಜೆಂಟ್ ಮಂಜುನಾಥ್ ಕುಲಾಲ್ ಅವರ ಮನೆಯಲ್ಲಿ ಸೆಪ್ಟೆಂಬರ್ 14ರಂದು ಬೆಳ್ಳಂಬೆಳಿಗ್ಗೆ ಮನೆಯೊಳಗೆ ಮಲಗುವ ಕೋಣೆಯಲ್ಲಿ ಸೇರಿಕೊಂಡ 10 ಫೀಟ್ ಉದ್ದದ ಹೆಬ್ಬಾವುವನ್ನು ಸೆರೆ ಹಿಡಿಯಲಾಗಿದೆ.
ಮಂಜುನಾಥ್ ಕುಲಾಲ್ ಎಂಬುವರ ಮನೆಯಲ್ಲಿ ಬೆಳಿಗ್ಗೆ 4:30ಕ್ಕೆ ಪೇಪರ್ ಸೆಟ್ ಮಾಡಲೆಂದು ಬಾಗಿಲು ತೆರೆದಿರುತ್ತಾರೆ, ಇದೇ ಸಂದರ್ಭದಲ್ಲಿ ಹೆಬ್ಬಾವು ಒಳಗೆ ಸೇರಿಕೊಂಡಿರಬಹುದು. ಈ ದಿನ ರಜೆಯಾದ್ದರಿಂದ ಮಂಜುನಾಥ್ ಅವರ ತಂಗಿ ರತ್ನ ಕುಲಾಲ್ ಕೋಣೆಯಲ್ಲಿ ಮಲಗಿಕೊಂಡಿದ್ದಾಗ ತಲೆ ದಿಂಬು ಎಂದು ಮುಟ್ಟಿದಾಗ ಹಬ್ಬಾವು ಗೋಚರಿಸಿಕೊಂಡಿತ್ತು. ದಿಗಿಲುಗೊಂಡ ಅವರು ಕೂಡಲೇ ಹರೀಶ್ ಎಂಬುವರಿಗೆ ಫೋನ್ ಮಾಡಿದರು. ಸ್ಥಳಕ್ಕೆ ಆಗಮಿಸಿದ ಹರೀಶ್ ಹೆಬ್ಬಾವನ್ನು ಸೆರೆಹಿಡಿದಿದ್ದಾರೆ. ಅವರೊಂದಿಗೆ ಗಿರೀಶ್, ಕಾಂತೇಶ್ ಸಹಕಾರ ನೀಡಿದರು.ಹಿಡಿದ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬರಲಾಯಿತು.
ಈ ವಠಾರದಲ್ಲಿ ಈಗಾಗಲೇ ಮೂರರಿಂದ ನಾಲ್ಕು ಹೆಬ್ಬಾವುಗಳನ್ನು ಸೆರೆ ಹಿಡಿದಿದ್ದಾರೆ. ಹತ್ತಿರದಲ್ಲಿ ನೀರು ಹರಿಯುವ ತೋಡು ಇರುವುದರಿಂದ ಹಾವು ತೋಡಿನ ಮೂಲಕ ಬಂದಿರಬಹುದು ತಿಳಿಯಲಾಗಿದೆ.