ಸಿದ್ದಾಪುರ ಜ್ಞಾನಸರಸ್ವತಿ ಕಾಲೇಜಿನಲ್ಲಿ ‘ಪ್ರಾಡಕ್ಟ್ ಪ್ರಮೋಷನ್ ಡೇ’

Views: 278
ಕನ್ನಡ ಕರಾವಳಿ ಸುದ್ದಿ: ಸಿದ್ದಾಪುರದ ಜ್ಞಾನಸರಸ್ವತಿ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ಸೆ.12ರಂದು ಹಮ್ಮಿಕೊಳ್ಳಲಾಗಿದೆ.
‘ಪ್ರಾಡಕ್ಟ್ ಪ್ರಮೋಷನ್ ಡೇ’ ವಿಷಯದ ಕುರಿತಾದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿ ಮಿನಿ ಬ್ಯುಸಿನೆಸ್ ಡೇ ಮಾದರಿಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.
ಕಾಲೇಜಿನ ವಾಣಿಜ್ಯ ವಿಭಾಗ, ಸ್ಪರ್ಧೆ ಆಯೋಜಿಸಿದ್ದರು. ವಿದ್ಯಾರ್ಥಿಗಳು ಸ್ವತಃ ತಾವೇ ತಯಾರಿಸಿದ ನಾನಾ ಬಗೆಯ ವಸ್ತುಗಳನ್ನು ಕಾಲೇಜಿಗೆ ತಂದು ಅದನ್ನು ವಿಶ್ಲೇಷಿಸಿ, ಅವರೇ ಸಂಕಲಿಸಿದ ಪ್ರಾಡಕ್ಟ್ ಪ್ರಮೋಷನ್ ವಿಡಿಯೋವನ್ನು ಪ್ರಸ್ತುತ ಪಡಿಸಿ, ಅದನ್ನು ಮಾರಾಟ ಮಾಡಿ ಸ್ಪರ್ಧೆಯ ಮೆರುಗನ್ನು ಹೆಚ್ಚಿಸಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಬಿ.ಎಸ್ ಸುರೇಶ್ ಶೆಟ್ಟಿ ಕಾರ್ಯಕ್ರಮವನ್ನು ರಿಬ್ಬನ್ ಕಟ್ ಮಾಡುವುದರೊಂದಿಗೆ ಉದ್ಘಾಟಿಸಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗುವುದಕ್ಕೆ ಸಹಕಾರ ನೀಡುವುದಾಗಿ ತಿಳಿಸಿ ಉಪನ್ಯಾಸಕರ ಹಾಗೂ ವಿದ್ಯಾರ್ಥಿಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಉಪ ಪ್ರಾಂಶುಪಾಲರಾದ ಹರ್ಷ ಶೆಟ್ಟಿ ಮಾತನಾಡಿ ಇದು ಕೇವಲ ಆರಂಭವಷ್ಟೆ ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಯ ಸಹಕಾರದ ಜೊತೆಗೆ ವಿದ್ಯಾರ್ಥಿಗಳು ಮತ್ತು ಭೋದಕ ಭೋದಕೇತರ ತಂಡ ಇನ್ನಷ್ಟು ಕಾರ್ಯೋನ್ಮುಖರಾಗಿ ಒಂದಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಪಾಂಡುರಂಗ ಪಡಿಯಾರ್,ಸರಸ್ವತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ವೇತಾ ಹಾಗೂ ಕಾಲೇಜಿನ ವಿಜ್ಞಾನ ವಿಭಾಗದ ಸಂಯೋಜಕರಾದ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು. ಸ್ಫರ್ದೆಯ ತೀರ್ಪುಗಾರರಾಗಿ ಉಪನ್ಯಾಸಕರಾದ ಸುಜಯ್, ಕೆ.ಎಸ್.ಉಪದ್ಯಾಯ, ನಾಗರಾಜ್ ಗುಳ್ಳಾಡಿ,ಆದಿತ್ಯ ಎಚ್.ಆರ್, ನಯನ ಶೆಟ್ಟಿ, ಶ್ರಾವ್ಯ ಕಾರ್ಯ ನಿರ್ವಹಿಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಜಗದೀಶ್ ನಿರೂಪಿಸಿ,ಸಹ ಶಿಕ್ಷಕಿ ನಾಗರತ್ನ.ಜಿ ವಂದಿಸಿದರು.