ಗಂಡನನ್ನು ಹತ್ಯೆಗೈದು ಬೈಕ್‌ನಲ್ಲಿ ಪ್ರೇಮಿ ಜೊತೆ ಮೃತದೇಹ ಕೊಂಡೊಯ್ದ ಪತ್ನಿ!

Views: 107
ಕನ್ನಡ ಕರಾವಳಿ ಸುದ್ದಿ: ಪತ್ನಿಯೇ ತನ್ನ ಪ್ರಿಯಕರನ ಸಹಕಾರದೊಂದಿಗೆ ಪತಿಗೆ ಚಟ್ಟ ಕಟ್ಟಿದ್ದಾಳೆ.
ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯಲ್ಲಿ ನೇಹಾ ಎಂಬಾಕೆ ಪತ್ನಿ ಪ್ರಿಯಕರ ಜಿತೇಂದ್ರ ನೊಂದಿಗೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ.
ಕೊನೆಗೆ ಅಪಘಾತದಂತೆ ಬಿಂಬಿಸಲು ಮನೆಯಿಂದ 25 ಕಿಲೋಮೀಟರ್ ದೂರದ ಸಿಂಧುರಿಯಾ ನಿಚ್ಲೌಲ್ ರಸ್ತೆಯಲ್ಲಿ ಎಸೆದಿದ್ದಾರೆ. ಕಳೆದ ಶನಿವಾರ ಬೆಳಗ್ಗೆ ನಾಗೇಶ್ವರ ಮೃತದೇಹವನ್ನು ರಸ್ತೆಯಲ್ಲಿ ನೋಡಿದ್ದ ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ಬಳಿಕ ನಾಗೇಶ್ವರ್ ತಂದೆ ಕೇಶವ್ ರಾಜ್ ಪೊಲೀಸರಿಗೆ ದೂರು ನೀಡಿದಾಗ ಪತ್ನಿಯೇ ನಾಗೇಶ್ವರನನ್ನು ಮುಗಿಸಿದ್ದು ತನಿಖೆಯಲ್ಲಿ ಬಯಲಾಗಿದ್ದು ಪತ್ನಿ ಮತ್ತು ಪ್ರಿಯಕರನನ್ನು ಬಂಧಿಸಿದ್ದಾರೆ.
ಶನಿವಾರ ಬೆಳಗ್ಗೆ ಮೃತದೇಹ ಪತ್ತೆಯಾದಾಗ ಎಲ್ಲರ ದೃಷ್ಟಿ ನೆಟ್ಟಿದ್ದೇ ನೇಹಾ ಮತ್ತು ಆಕೆಯ ಪ್ರಿಯಕರ ಜಿತೇಂದ್ರ ಮೇಲೆ. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹಂತಕರು ಬಾಯ್ವಿಟ್ಟಿದ್ದಾರೆ.
ಅಂದಾಗೆ ನಾಗೇಶ್ವರ್ ಆಗಾಗ ಕೆಲಸಕ್ಕಾಗಿ ನೇಪಾಳಕ್ಕೆ ಭೇಟಿ ನೀಡುತ್ತಿದ್ದ ವೇಳೆ ಅಲ್ಲೇ ನೇಹಾಳ ಪರಿಚಯವಾಗಿ 6 ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ ಆದ್ವಿಕ್ ಎಂಬ ಮಗನಿದ್ದಾನೆ. ಆದರೆ ವಿಚಾರಣೆಯ ಸಮಯದಲ್ಲಿ, ನೇಹಾ ತನ್ನ ಊರಿನ ಸಮೀಪದ ಜಿತೇಂದ್ರ ಜೊತೆ ಒಂದು ವರ್ಷದಿಂದ ಸಂಬಂಧ ಹೊಂದಿದ್ದನ್ನು ಬಾಯ್ಬಿಟ್ಟಿದ್ದಾಳೆ. ನಾಗೇಶ್ವರ್ ಇದಕ್ಕೆ ವಿರೋಧಿಸಿದಾಗ ನೇಹಾ ಮಗನೊಂದಿಗೆ ಮಹಾರಾಜ್‌ಗಂಜ್ ನಗರದ ಬಾಡಿಗೆ ಮನೆಯಲ್ಲಿ ಜಿತೇಂದ್ರ ಜೊತೆ ವಾಸಿಸಲು ಪ್ರಾರಂಭಿಸಿದಳು.
ನಾಗೇಶ್ವರ್ ಎಷ್ಟೇ ಮನವೊಲಿಸಲು ಪ್ರಯತ್ನಿಸಿದ್ರೂ ಕೇಳಿರಲಿಲ್ಲ. ಅಲ್ಲದೇ ಹಲವು ಬಾರಿ ಹಿಂಸೆ ಕೂಡ ನೀಡ್ತಿದ್ದ. ಇದರಿಂದ ಕೋಪಿಸಿಕೊಂಡಿದ್ದ ನೇಹಾ ಸಾಕಷ್ಟು ಬಾರಿ ಜಗಳ ಮಾಡಿ ಕೊನೆಗೆ ಮಗನನ್ನು ಕರೆದುಕೊಂಡು ಪ್ರೇಮಿಯ ಜೊತೆ ವಾಸಿಸೋಕೆ ಶುರು ಮಾಡಿದ್ದಾಳೆ.ಪತಿ ಆಗಾಗ್ಗೆ ಕರೆ ಮಾಡಿ ಪತ್ನಿಗೆ ಹಿಂಸೆ ನೀಡ್ತಿದ್ದ. ಇವನಿಂದ ಶಾಶ್ವತವಾಗಿ ಬಿಡುಗಡೆ ಪಡೆಯಲು ನಾಗೇಶ್ವರನಿಗೆ ಕರೆ ಮಾಡಿ ಕರೆಸಿ ಮದ್ಯಪಾನ ಮಾಡಿಸಿ ಕೊಲೆ ಮಾಡಿದ್ದಾರೆ. ನೇಹಾನೇ ದುಪಟ್ಟಾದಿಂದ ಕಾಲು ಕಟ್ಟಿ, ಕತ್ತು ಹಿಸುಕಿದ್ರೆ ಜಿತೇಂದ್ರ ಹೊಡೆದು ಬಡಿದು ಕೊಂದಿದ್ದಾರೆ. ಬಳಿಕ ನಾಗೇಶ್ವರನ ಬಟ್ಟೆಗಳನ್ನು ತೆಗೆದು ಸ್ನಾನ ಮಾಡಿಸಿ, ಶವವನ್ನು ಬೈಕ್‌ನಲ್ಲಿ ಕೂರಿಸಿ ಘಟನಾ ಸ್ಥಳದಿಂದ 25 ಕಿ.ಮೀ ದೂರದಲ್ಲಿ ವಿಲೇವಾರಿ ಮಾಡಿದ್ದಾರೆ.