ಶಿಕ್ಷಣ

ಬ್ರಹ್ಮಾವರ: ಕಾಲೇಜಿಗೆಂದು ಹೋಗಿ ನಾಪತ್ತೆಯಾಗಿದ್ದ ಬಿಸಿಎ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಪತ್ತೆ

Views: 188

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ  ಬ್ರಹ್ಮಾವರ ವಿದ್ಯಾಲಕ್ಷ್ಮೀ ಗ್ರೂಪ್ ಆಫ್ ಇನ್ಸಿಟ್ಯೂಷನ್ ನ ಬಿಸಿಎ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿದ್ಯಾರ್ಥಿನಿಯು ತಾನು ಬೆಂಗಳೂರಿಗೆ ಹೋಗಿದ್ದು ವಾಪಸು ಬರುವುದಾಗಿ ಹೇಳಿರುವುದಾಗಿ ತಿಳಿದುಬಂದಿದೆ.

ಹಾಸ್ಟೆಲ್‌ ನಿಂದ ಕಾಲೇಜಿಗೆ ಹೊರಟಿದ್ದವಳು  ಕಾಲೇಜಿಗೆ ಬಂದಿರಲಿಲ್ಲ ಮನೆಗೂ ಹೋಗದೆ,  ನಾಪತ್ತೆ ಆಗಿರುವ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ವಿದ್ಯಾರ್ಥಿನಿಯೇ ಸ್ವತಃ ತಾನು ಬೆಂಗಳೂರಿಗೆ ಬಂದಿದ್ದು, ವಾಪಸು ಬರುವುದಾಗಿ ತಿಳಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಇದೀಗ ಪೋಲಿಸ್ ತನಿಖೆಯಿಂದ ಇನ್ನಷ್ಟು ಮಾಹಿತಿ ಹೊರ ಬರಬೇಕಾಗಿದೆ.

 

 

Related Articles

Back to top button