ಶಿಕ್ಷಣ

🏆 ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ “ವಿಕ್ಟರ್ ಅವಾರ್ಡ್ ಟ್ರೋಫಿ” ಅನಾವರಣ

Views: 151

ಕನ್ನಡ ಕರಾವಳಿ ಸುದ್ದಿ: ಮದರ್ ತೆರೆಸಾ ಶಿಕ್ಷಣ ಸಂಸ್ಥೆ ಶಂಕರನಾರಾಯಣದಲ್ಲಿ 23-9-2025 ರಂದು ನಡೆಯಲಿರುವ ವಿಕ್ಟರ್ ಅವಾರ್ಡ ಕಾರ್ಯಕ್ರಮಕ್ಕಾಗಿ ಇಂದು “ವಿಕ್ಟರ್ ಟ್ರೋಫಿ”ಯನ್ನು ಸಂಸ್ಥಾಪಕದ್ವಯರು ಅನಾವರಣಗೊಳಿಸಿದರು.

ಸಂಸ್ಥೆಯಲ್ಲಿ ಪೂರ್ವ ಕಿರಿಯ ಪ್ರಾಥಮಿಕದಿಂದ ಹಿಡಿದು ಪದವಿ ಪೂರ್ವವರೆಗಿನ ವಿದ್ಯಾರ್ಥಿಗಳನ್ನು ರೂಬಿ, ಎಮರಾಲ್ಡ್, ಸಫಾಯರ್ ಮತ್ತು ಟೋಪಾಜ್ ಎಂಬ ನಾಲ್ಕು ತಂಡಗಳಾಗಿ ವಿಭಾಗಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವುದರ ಜೊತೆಗೆ ನಾಯಕತ್ವದ ಹೊಣೆಗಾರಿಕೆಯನ್ನು ಅರಿಯುವ ಪಾಠವನ್ನು ಕಲಿಸುವ ಉದ್ದೇಶದಿಂದ ಈ ತಂಡಗಳ ನಡುವೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಮೊದಲ ಟೀಮ್ ನ ಕೊನೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಕಲೆ ಹಾಕಿದ ತಂಡಕ್ಕೆ “ವಿಕ್ಟರ್ ಅವಾರ್ಡ್” ಪ್ರಧಾನ ಮಾಡಲಾಗುವುದು.

ಇಂದಿನ ಅನಾವರಣ ಸಮಾರಂಭದಲ್ಲಿ ಎಲ್ಲಾ ತಂಡಗಳ ನಾಯಕರು ತಮ್ಮ ತಮ್ಮ ಧ್ವಜಗಳನ್ನು ಹಿಡಿದು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ರಾಜ್ಯಮಟ್ಟದ ಪ್ರತಿಭೆ ರೋಶನ್ ಆರ್. ಅವರನ್ನು ಬ್ಯಾಂಡ್ ಸೆಟ್ ಮೂಲಕ ವೇದಿಕೆಯತ್ತ ಕರೆತರಲಾಯಿತು.

ವಿದ್ಯಾರ್ಥಿಗಳು ಟ್ರೋಫಿಯ ಅನಾವರಣವನ್ನು ಕಣ್ತುಂಬಿಕೊಂಡು, ಈ ಬಾರಿಯ ವಿಕ್ಟರ್ ಅವಾರ್ಡ್ ಟ್ರೋಫಿ ಯಾವ ತಂಡದ ಪಾಲಾಗಬಹುದು? ಎಂಬ ಕುತೂಹಲವೇ ಅವರಿಗೆ ಹೊಸ ಉತ್ಸಾಹ, ಹೊಸ ಕನಸು,ಹೊಸ ಹಾದಿಯನ್ನು ತೋರಿಸಿತು. ಈ ಕಾರ್ಯಕ್ರಮವನ್ನು ಸಾಂಸ್ಕೃತಿಕ ಹಾಗೂ ಭಾಷಾ ನಿರ್ದೇಶಕಿ ನಡೆಸಿಕೊಟ್ಟರು.

Related Articles

Back to top button