ಕರಾವಳಿ

ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳ ರಾಶಿ… ವಿಠಲ ಗೌಡರ ಹೇಳಿಕೆಗೆ ಬಿಜೆಪಿ ಮೌನವೇಕೆ?: ಖರ್ಗೆ ತರಾಟೆ 

Views: 163

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಚಲೋ ಮೂಲಕ ಸುದ್ದಿಯಾದ ಬಿಜೆಪಿ ನಾಯಕರು ಇದೀಗ ಮದ್ದೂರು ಚಲೋಗೆ ಮುಂದಾಗಿರುವುದು, ಧರ್ಮಸ್ಥಳ ಪ್ರಕರಣದ ಕುರಿತು ಅವರ ಮೌನ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಅವರು ಸರಣಿ ಟ್ವಿಟ್ ಗಳ ಮೂಲಕ ಬಿಜೆಪಿ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.ಪ್ರಿಯಾಂಕ ಖರ್ಗೆ ತಮ್ಮ ಟ್ವಿಟ್ ಗಳಲ್ಲಿ ಧರ್ಮಸ್ಥಳ ಚಲೋ ಮಾಡಿದ್ದ ಬಿಜೆಪಿಯವರು ಧರ್ಮಸ್ಥಳವನ್ನು ಮರೆತು ಮದ್ದೂರು ಚಲೋ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಧರ್ಮಸ್ಥಳದ ಬಗ್ಗೆ ಏಕಾಏಕಿ ಮೌನಕ್ಕೆ ಜಾರಿರುವುದು ಏಕೆ? ಬಿಜೆಪಿಯವರ ಧರ್ಮರಕ್ಷಣೆಯ ನಾಟಕವು ನಾಲ್ಕು ದಿನದ ಪ್ರದರ್ಶನಕ್ಕೆ ಮಾತ್ರ ಸೀಮಿತವೇ?” ಎಂದು ಪ್ರಶ್ನಿಸಿದ್ದಾರೆ.

ಸೌಜನ್ಯ ಸಂಬಂಧಿ ವಿಠಲ್ ಗೌಡರವರು ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳ ರಾಶಿಯೇ ಕಂಡಿದೆ ಎಂಬ ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದು, ಆ ಸ್ಥಳವು ಅಕ್ಷರಶಃ ಯುದ್ಧಕಣದಂತೆ ಭಾಸವಾಗುತ್ತದೆ ಎಂದು ವರದಿಗಳು ಹೇಳುತ್ತವೆ. ಈ ಗಂಭೀರ ಆರೋಪಗಳ ಬಗ್ಗೆಯೂ ಬಿಜೆಪಿ ನಾಯಕರ ಮೌನ ಮುಂದುವರಿದಿದೆ.

ಸೌಜನ್ಯರ ಮನೆಗೆ ಭೇಟಿ ನೀಡಿದ್ದ ಬಿಜೆಪಿಯವರು ಆ ಕುಟುಂಬದವರ ಹೇಳಿಕೆಯ ಬಗ್ಗೆ ಏನು ಹೇಳುತ್ತಾರೆ? ವಿಠಲ್ ಗೌಡರ ಹೇಳಿಕೆಯ ಬಗ್ಗೆ ಬಿಜೆಪಿಯವರ ಮೌನವೇಕೆ?” ಎಂದು ಖರ್ಗೆ ಪ್ರಶ್ನಿಸಿದ್ದಾರೆ. ನಾಯಕರು ತಾವು ಸೌಜನ್ಯ ಕುಟುಂಬದವರ ಪರವೋ ಅಥವಾ ಅವರು ಆರೋಪಿಸುತ್ತಿರುವವರ ಪರವೋ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ಸಚಿವರು ಒತ್ತಾಯಿಸಿದ್ದಾರೆ.

ಬುರುಡೆ ತಲೆದಂಡ ಯಾರು ಯಾರಿಗೆ?

ಬುರುಡೆ ಹಿಡಿದುಕೊಂಡು ಚಿನ್ನಯ್ಯನ ಜತೆ ಬೆಂಗಳೂರು, ಕೇರಳ, ದಿಲ್ಲಿಯವರೆಗೆ ಸುತ್ತಾಡಿರುವ ಸೂತ್ರಧಾರಿಗಳು ಯಾರು? ಯಾರನ್ನೆಲ್ಲ ಭೇಟಿಯಾಗಿದ್ದರು? ಇದರ ಹಿಂದಿರುವ ಪ್ರಮುಖರು ಯಾರು ಎಂಬ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಶನಿವಾರ ಗಿರೀಶ್ ಮಟ್ಟಣ್ಣನವರ್‌ ಮತ್ತು ಸಾಕ್ಷಿದಾರ ಬಂಟ್ವಾಳದ ಪ್ರದೀಪ್ ಬೆಳಗ್ಗೆ 10 ಕ್ಕೆ ಎಸ್‌ಐಟಿ ಕಚೇರಿಗೆ ಹಾಜರಾದರು. ಬಳಿಕ ಸ್ವಲ್ಪ ಹೊತ್ತಿನಲ್ಲಿ ಸೌಜನ್ಯಾಳ ಮಾವ ವಿಠಲ ಗೌಡ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರಾದರು.

Related Articles

Back to top button