ಸಾಂಸ್ಕೃತಿಕ

ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲೇ ಗತಿ: ಈ ಎಲ್ಲಾ ಹೆಚ್ಚಿನ ಸೌಲಭ್ಯಕ್ಕೆ ಒಪ್ಪಿದ ಕೋರ್ಟ್

Views: 273

ಕನ್ನಡ ಕರಾವಳಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಬಾರಿಗೆ ಜೈಲು ಸೇರಿರುವ ನಟ ದರ್ಶನ್ ಗೆ ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ.

ಜೈಲಿನಲ್ಲಿ ಹಾಸಿಗೆ, ಬೆಡ್ ಶೀಟ್, ತಲೆದಿಂಬು ನೀಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ, ದರ್ಶನ್ ಮನವಿಗೆ ಸ್ಪಂದಿಸಿದೆ. ಬೆಳಿಗ್ಗೆ ನಡೆದ ವಿಚಾರಣೆ ವೇಳೆ ನಟ ದರ್ಶನ್ ದಯವಿಟ್ಟು ನನಗೆ ಸ್ವಲ್ಪ ವಿಷ ಕೊಟ್ಟು ಬಿಡಿ. ಜೈಲಿನಲ್ಲಿರಲು ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟಿದ್ದರು. ನಾನು ಬಿಸಿಲು ನೋಡದೇ 30 ದಿನಗಳಾಗಿವೆ. ಕೈಯಲ್ಲಿ ಫಂಗಸ್ ಬಂದಿದೆ. ತುಂಬಾ ಕಿರಿಕಿಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು. ಆದೇಶವನ್ನು ಕೋರ್ಟ್ ಮಧ್ಯಾಹ್ನಕ್ಕೆ ಕಾಯ್ದಿರಿಸಿತ್ತು.

ಮಧ್ಯಾಹ್ನ ವಿಚಾರಣೆ ನಡೆಸಿದ ನ್ಯಾಯಾಲಯ ದರ್ಶನ್ ಮನವಿಯಂತೆ ಬೆಡ್ ಶೀಟ್, ಹಾಸಿಗೆ, ತಲೆದಿಂಬು ನೀಡಲು ಒಪ್ಪಿದೆ. ಅಲ್ಲದೇ ದರ್ಶನ್ ಗೆ ಜೈಲಿನಲ್ಲಿ ವಾಕ್ ಮಾಡಲು ಅವಕಾಶ ನೀಡಿದೆ. ವಾರದಲ್ಲಿ ಎರಡು ದಿನ ಕುಟುಂಬಕ್ಕೆ ಕರೆ ಮಾಡಲು ಅವಕಾಶವಿದೆ. ಜೈಲಿನ ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡುವಂತಿಲ್ಲ. ಸದ್ಯಕ್ಕೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಅಗತ್ಯವಿಲ್ಲ, ನಿಯಮ ಉಲ್ಲಂಘನೆ ಮಾಡಿದರೆ ಬೇರೆ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.

Related Articles

Back to top button
error: Content is protected !!